ADVERTISEMENT

ಇದೇ 18ರಿಂದ ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಯಾತ್ರೆ: ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 15:26 IST
Last Updated 11 ಜನವರಿ 2024, 15:26 IST
<div class="paragraphs"><p> ಸಚಿವ ರಾಮಲಿಂಗಾರೆಡ್ಡಿ</p></div>

ಸಚಿವ ರಾಮಲಿಂಗಾರೆಡ್ಡಿ

   

ಬೆಂಗಳೂರು: ರಾಮೇಶ್ವರ, ಕನ್ಯಾಕುಮಾರಿ, ಮದುರೈ, ತಿರುವನಂತಪುರಕ್ಕೆ ಕರ್ನಾಟಕ ಭಾರತ್‌ ಗೌರವ್‌ ದಕ್ಷಿಣ ಯಾತ್ರೆಯು ಜ.18ರಂದು ಆರಂಭಗೊಳ್ಳಲಿದೆ.

ದಕ್ಷಿಣ ಯಾತ್ರಾ ವಿಶೇಷ ರೈಲು ಜ.18ರಂದು ಹೊರಡಲಿದ್ದು, ಜ.23ರಂದು ವಾಪಸ್ಸಾಗಲಿದೆ. ಜ.30ಕ್ಕೆ ಹೊರಡುವ ರೈಲು ಫೆ.4ಕ್ಕೆ ವಾಪಸ್ಸಾಗಲಿದೆ. ಪ್ರವಾಸ ಬಯಸುವವರು ಐಆರ್‌ಸಿಟಿಸಿ/ಐಟಿಎಂಎಸ್‌ ವೆಬ್‌ಸೈಟ್‌ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ADVERTISEMENT

ಅತಿ ಕಡಿಮೆ ವೆಚ್ಚದ ಒಂದು ವಾರದ ಯಾತ್ರೆಯು ಇದಾಗಿದ್ದು, ರಾಮೇಶ್ವರ ದೇವಾಲಯ, ಭಗವತಿ ದೇವಾಲಯ, ಮೀನಾಕ್ಷಿ ದೇವಾಲಯ, ಅನಂತಪದ್ಮನಾಭ ದೇವಾಲಯಗಳ ದರ್ಶನ ಪಡೆಯಬಹುದು. ಯಾತ್ರೆಯ ಪ್ಯಾಕೇಜ್‌ ಮೊತ್ತ ₹ 15,000 ಆಗಿದ್ದು, ಕರ್ನಾಟಕ ಸರ್ಕಾರವು ₹ 5,000 ಸಹಾಯಧನ ನೀಡಲಿದೆ. ಯಾತ್ರಿಗಳು ₹ 10,000 ಪಾವತಿಸಬೇಕು. ಯಾತ್ರೆಯ ವಿಶೇಷ ರೈಲು ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಯಶವಂತಪುರದಲ್ಲಿ ನಿಲುಗಡೆ ನೀಡಲಿದೆ. ಅಲ್ಲಿ ಯಾತ್ರಿಗಳಿಗೆ ಹತ್ತಲು ಮತ್ತು ಇಳಿಯಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.