ADVERTISEMENT

Karnataka Budget 2024 Opinion: ಕಾರ್ಮಿಕರಿಗೂ ಸಮಪಾಲು ನೀಡುವ ಬಜೆಟ್ ಬೇಕಿತ್ತು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 0:28 IST
Last Updated 17 ಫೆಬ್ರುವರಿ 2024, 0:28 IST
ಮೈತ್ರೇಯಿ ಕೆ.
ಮೈತ್ರೇಯಿ ಕೆ.   

ಕಾರ್ಮಿಕರ ಹಕ್ಕುಗಳಿಗಾಗಿ ದೀರ್ಘಕಾಲ ನಡೆದ ಹೋರಾಟದ ಫಲವಾಗಿ ಈ ಬಜೆಟ್‍ನಲ್ಲಿ ಒಂದಷ್ಟು ಸಮಾಧಾನಕರ ಅಂಶಗಳನ್ನು ಕಾಣಬಹುದು. ಆದರೆ ಸಮಪಾಲು ನೀಡುವ ನಿಟ್ಟಿನಲ್ಲಿ ಬಜೆಟ್ ಮಂಡನೆಯಾಗಬೇಕಾಗಿತ್ತು.

ಪೌರಕಾರ್ಮಿಕರ ಹಲವು ದಶಕಗಳ ಕಾಲದ ಹೋರಾಟದ ಫಲವಾಗಿ 24,005 ಪೌರಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಘೋಷಿಸಿರುವುದು ಒಳ್ಳೆಯ ತೀರ್ಮಾನ. ತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಕಸ ಸಂಗ್ರಹಿಸುವ ಮತ್ತು ವಿಲೇವಾರಿ ಮಾಡುವ ಕಾರ್ಮಿಕರನ್ನು ನಿರ್ಲಕ್ಷಿಸಲಾಗಿದೆ. 

ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಯೋಜನೆಯನ್ನು ಮತ್ತು ಸಾರಿಗೆ ವಲಯದಲ್ಲಿರುವ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ನಿರ್ಧಾರ ಪ್ರಮುಖವಾಗಿವೆ. ಎಲ್ಲ ಯೋಜನಾ ಕಾರ್ಮಿಕರಿಗೂ, ಗಿಗ್‌ ಕೆಲಸಗಾರರಿಗೂ ಕೆಲಸ, ನ್ಯಾಯಯುತ ವೇತನ ಮತ್ತು ಘನತೆಯುಕ್ತ ಕೆಲಸದ ವಾತಾವರಣವನ್ನು ಖಾತ್ರಿಪಡಿಸಬೇಕಾಗಿತ್ತು. 

ADVERTISEMENT

ಎಲ್ಲ ಇಲಾಖೆಗಳಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು. ಎಲ್ಲ ಕಾರ್ಮಿರನ್ನು ಕಾಯಂಗೊಳಿಸಬೇಕು. ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದರಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂತೆಯೇ ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಒಳಗೊಂಡಿರಬೇಕಾಗಿತ್ತು.

ಕಾರ್ಮಿಕ ಇಲಾಖೆಯನ್ನು ಬಲಗೊಳಿಸುವುದರ ಬಗ್ಗೆ ಯಾವುದೇ ಯೋಜನೆಗಳು ಇಲ್ಲ. ಸಿಬ್ಬಂದಿ ಮತ್ತು ಮೂಲ ಸೌಕಾರ್ಯಗಳನ್ನು ಒದಗಿಸುವುದು ಅತ್ಯವಶ್ಯಕ.

ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರಿಗೆ ಸಮಪಾಲು ನೀಡುವ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸುವುದು ಅವಶ್ಯ.

- ಮೈತ್ರೇಯಿ ಕೆ., ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.