ADVERTISEMENT

Karnataka Budget: ಶ್ರೀಮಂತರು, ಬಿಲ್ಡರ್‌ಗಳ ಜೇಬು ತುಂಬಿಸುವ ಬಜೆಟ್

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 19:40 IST
Last Updated 4 ಮಾರ್ಚ್ 2022, 19:40 IST
ಲೇಖಾ ಅಡವಿ
ಲೇಖಾ ಅಡವಿ   

ಬಜೆಟ್‌ನಲ್ಲಿ ಬೆಂಗಳೂರು ನಗರದ ಅಭಿವೃದ್ಧಿಯ ಪರಿಕಲ್ಪನೆಯೇ ಬೇರೆ ರೀತಿ ಇದೆ. ಬೆಂಗಳೂರಿನ ನಾಗರಿಕರು ಯಾವ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ, ಅದರಿಂದ ಅವರನ್ನು ಪಾರು ಮಾಡುವುದು ಹೇಗೆ ಎಂಬ ಪರಿಕಲ್ಪನೆಯೇ ಸರ್ಕಾರಕ್ಕೆ ಇದ್ದಂತೆ ಇಲ್ಲ. ಉದ್ಯಾನ, ನಮ್ಮ ಕ್ಲಿನಿಕ್, ಮೆಟ್ರೊ ರೈಲಿಗೆ ಹಣ ನೀಡಲಾಗಿದೆ. ಇವೆಲ್ಲವೂ ಕಟ್ಟಡಗಳನ್ನು ಕಟ್ಟುವ ಕೆಲಸಗಳೇ ಹೊರತು ಜನರಿಗೆ ಬೇಕಿರುವ ನಿಜವಾದ ಅಭಿವೃದ್ಧಿ ಅಲ್ಲ. ಕೋವಿಡ್‌ ನಂತರ ಕಾರ್ಮಿಕರ ಸಂಬಳ ಕಡಿಮೆಯಾಗಿದೆ. ಅಡುಗೆ ಅನಿಲ, ತರಕಾರಿ, ಬೇಳೆ ಸೇರಿ ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಪಡಿತರ ಚೀಟಿ ಹೊಂದಿದವರಿಗೆ ಕೊಡುತ್ತಿರುವ ಅಕ್ಕಿ ಪ್ರಮಾಣ ಕಡಿಮೆ ಮಾಡಲಾಗಿದೆ.

ಬಡವರನ್ನು ಕೊಳೆಗೇರಿಗಳಿಂದ ಎತ್ತಂಗಡಿ ಮಾಡಿ ಊರಾಚೆಗೆ ಬಿಡಲಾಗುತ್ತಿದೆ. ಈ ರೀತಿಯ ಬಿಕ್ಕಟ್ಟಿನಲ್ಲಿ ಜನ ಸಿಲುಕಿರುವಾಗ ಮೆಟ್ರೊ ರೈಲಿಗೆ ಹಣ ಕೊಡುವುದೇ ಅಭಿವೃದ್ಧಿ ಎಂದರೆ ಹೇಗೆ? ಸರ್ಕಾರಿ ಶಾಲೆಯ ಮಕ್ಕಳು ಎರಡು ವರ್ಷಗಳಿಂದ ಶಿಕ್ಷಣದಲ್ಲಿ ಹಿಂದೆ ಬಿದ್ದಿದ್ದಾರೆ. ಅವರನ್ನು ಶೈಕ್ಷಣಿಕವಾಗಿ ಮೇಲೆತ್ತುವುದು ಹೇಗೆ ಎಂಬ ಆಲೋಚನೆ ಮತ್ತು ಉದ್ದೇಶ ಎರಡೂ ಸರ್ಕಾರಕ್ಕೆ ಇಲ್ಲ. ಯಾವುದೇ ಬಜೆಟ್‌ನಲ್ಲೂ ಈ ರೀತಿಯ ಮುನ್ನೋಟ ಕಂಡಿಲ್ಲ, ಈಗಲೂ ಅದೇ ಆಗಿದೆ. ದುಡಿಯುವ ವರ್ಗಕ್ಕೆ ಬಸ್‌ ಸೌಕರ್ಯವನ್ನಾದರೂ ಉಚಿತವಾಗಿ ಕಲ್ಪಿಸಬೇಕಿತ್ತು. ಬಿಎಂಟಿಸಿಗೆ ಹಣ ನೀಡಿದ್ದರೆ ಅದು ಸಾಧ್ಯವಾಗುತ್ತಿತ್ತು. ಶ್ರೀಮಂತರಿಗೆ ಮತ್ತು ಬಿಲ್ಡರ್‌ಗಳ ಜೇಬಿಗೆ ಹಣ ತುಂಬಿಸುವ ಬಜೆಟ್‌ ಇದಾಗಿದೆಯೇ ಹೊರತು ಜನರ ಅಭಿವೃದ್ಧಿಗೆ ಪೂರಕವಾಗಿಲ್ಲ.

ಲೇಖಾ ಅಡವಿ, ಆಲ್‌ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್‌ ಯೂನಿಯನ್ಸ್

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.