ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ 10 ವಿಲಾಸಿ ಕಾರುಗಳನ್ನು ಹೊಂದಿದ್ದು, ಒಟ್ಟು ₹ 424 ಕೋಟಿ ಆಸ್ತಿ ಹೊಂದಿದ್ದಾರೆ.
ಶನಿವಾರ ತಮ್ಮ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಆಯೋಗಕ್ಕೆ ನೀಡಿದ ಪ್ರಮಾಣಪತ್ರದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.
ಹೆಬ್ಬಾಳ ಶಾಸಕ ಸುರೇಶ್ ಅವರ ಪತ್ನಿ ಆಗಿರುವ ಅವರಲ್ಲಿ ₹ 16.63 ಕೋಟಿ ಮೌಲ್ಯದ ಚರಾಸ್ತಿ ಇದೆ. ₹ 407 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಸಂಬಳ, ಕೃಷಿ ಮತ್ತು ಮನೆ ಆಸ್ತಿಯೇ ತಮ್ಮ ಆದಾಯದ ಮೂಲ ಎಂದು ಹೇಳಿಕೊಂಡಿರುವ ಅವರು, 2018–19ರಲ್ಲಿ ಐಟಿ ರಿಟರ್ನ್ಸ್ ಸಲ್ಲಿಸಿದ ವೇಳೆ ₹ 9.11 ಲಕ್ಷ ಆದಾಯ ತೋರಿಸಿದ್ದರು.
ಕಾರುಗಳ ಮೋಹ: ದಂಪತಿಗೆ ಕಾರುಗಳ ಬಗ್ಗೆ ಮೋಹ ಇರುವುದು ಸ್ಪಷ್ಟವಾಗಿದೆ. ಪದ್ಮಾವತಿ ಅವರ ಬಳಿ ಪ್ರೊಡೊ, ಔಡಿ, ಹುಂಡೈ ಐ20, ₹ 91 ಲಕ್ಷದ ಬೆಂಜ್, ಒಂದು ಜೆಸಿಬಿ ಇದೆ. ಸುರೇಶ್ ಬಳಿ 3 ಇನ್ನೋವಾ ಕಾರುಗಳು, ಮಹೀಂದ್ರಾ ಜೀಪ್, ₹ 1 ಕೋಟಿ ಮೌಲ್ಯದ ಬೆಂಜ್ ಕಾರು ಇದೆ.
ದಂಪತಿ ಬಳಿ ₹ 1.36 ಕೋಟಿ ಮೌಲ್ಯದ 3.5 ಕೆ.ಜಿ. ಚಿನ್ನ, ₹ 30 ಲಕ್ಷ ಮೌಲ್ಯದ 60 ಕೆ.ಜಿ. ಬೆಳ್ಳಿ ಇದೆ. ಸುರೇಶ್ ಅವರಿಗೆ ₹ 24.75 ಕೋಟಿ ಸಾಲ ಇದೆ.
ಶರತ್ ಬಚ್ಚೇಗೌಡರ ಆಸ್ತಿ ಮೌಲ್ಯ
ಇದೇ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ತಮ್ಮ ಮತ್ತು ಪತ್ನಿ ಪ್ರತಿಭಾ ಅವರ ಒಟ್ಟು ಆಸ್ತಿ ಮೌಲ್ಯ ₹ 138 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.