ಬೆಂಗಳೂರು: ಕಲಾವಿದರಾದ ಶಾಂತಿ ಸೂರಜ್ ಮತ್ತು ಜೋಶೀಲಾ ಎಸ್.ವಿ. ಅವರ ‘ಜೋಶಾ’ – ಮೈಸೂರು ಸಾಂಪ್ರದಾಯಿಕ ವರ್ಣಚಿತ್ರಗಳ ಪ್ರದರ್ಶನ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಗುರುವಾರ ಆರಂಭಗೊಂಡಿದೆ.
ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ಕಲಾಕೃತಿಗಳಿವೆ. ಪ್ರತಿ ಕಲಾಕೃತಿಯೂ ಭಾರತೀಯ ಪ್ರಾಚೀನ ಸಂಸ್ಕೃತಿಯನ್ನು ಬಿಂಬಿಸುತ್ತಿವೆ.
ವಾಟರ್ ಕಲರ್ ಮತ್ತು ಪೋಸ್ಟರ್ ಕಲರ್ ಬಳಸಿಕೊಂಡು ಬಹುತೇಕ ಕಲಾಕೃತಿಗಳನ್ನು ರಚಿಸಲಾಗಿದೆ.
ಸಿದ್ಧಿವಿನಾಯಕ, ನೃತ್ಯ ಗಣಪತಿ, ವಿಜಯ ಗಣಪತಿ, ವರ ಗಣಪತಿ, ಗಣೇಶ, ಶ್ರೀಕೃಷ್ಣ, ನವನೀತ ಕೃಷ್ಣ, ಯಶೋದಾ–ಕೃಷ್ಣ, ಕೃಷ್ಣ ಪಾರಿಜಾತ, ಕೃಷ್ಣ ತುಲಾಭಾರ, ವೇಣುಗೋಪಾಲ, ಶ್ರೀರಾಮ ಪಟ್ಟಾಭಿಷೇಕ, ಕೋದಂಡರಾಮ ಮತ್ತು ದಶಾವತಾರ, ಚಿನ್ನದ ಜಿಂಕೆಯನ್ನು ಬಯಸುವ ಸೀತೆ, ಲವ–ಕುಶ, ಗಿರಿಜಾ ಕಲ್ಯಾಣ.. ಹೀಗೆ ಅನೇಕ ಪುರಾಣಪಾತ್ರಗಳು ಕಲಾರೂಪದಲ್ಲಿ ಇಲ್ಲಿ ಅನಾವರಣಗೊಂಡಿವೆ.
ನ.19ರ ವರೆಗೆ ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಸಾರ್ವಜನರಿಗೆ ಪ್ರವೇಶ ಉಚಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.