ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ಚುನಾಯಿತರಾಗಿದ್ದಾರೆ.
ಈ ಸ್ಥಾನಕ್ಕೆ ಅವರು ನಾಲ್ಕನೇ ಬಾರಿ ಆಯ್ಕೆಯಾಗಿದ್ದಾರೆ. ಪರಿಷತ್ತಿನಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಭಾನುವಾರ ಚುನಾವಣೆ ನಡೆಯಿತು.ಪರಿಷತ್ತಿನ ಆವರಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸದಸ್ಯರು ಮತದಾನ ಮಾಡಿದರು.ಬಿ.ಎಲ್. ಶಂಕರ್ ಅವರು 122 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿಪ್ರೊ.ಕೆ.ಇ. ರಾಧಾಕೃಷ್ಣ ಅವರು 20 ಮತಗಳನ್ನು ಪಡೆದರು. ನಾಲ್ಕನೇ ಬಾರಿ ಅಧ್ಯಕ್ಷರಾಗಿ ಚುನಾಯಿತರಾಗಿರುವ ಬಿ.ಎಲ್. ಶಂಕರ್, ಈ ಹಿಂದೆ ಎರಡು ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಪರಿಷತ್ತಿನ ಉಪಾಧ್ಯಕ್ಷರಾಗಿಪ್ರೊ.ಕೆ.ಎಸ್. ಅಪ್ಪಾಜಯ್ಯ, ಟಿ. ಪ್ರಭಾಕರ್ ಹಾಗೂ ಎ. ರಾಮಕೃಷ್ಣಪ್ಪ ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎನ್. ಶಶಿಧರ್ ಚುನಾಯಿತರಾಗಿದ್ದಾರೆ. ಸಹಾಯಕ ಕಾರ್ಯದರ್ಶಿಯಾಗಿಟಿ. ಚಂದ್ರಶೇಖರ್ ಮತ್ತು ಬಿ.ಎಲ್. ಶ್ರೀನಿವಾಸ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿಎನ್. ಲಕ್ಷ್ಮೀಪತಿ ಬಾಬು ಅವರು ಚುನಾಯಿತರಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿಟಿ.ವಿ. ತಾರಕೇಶ್ವರಿ, ಆರ್.ಜಿ. ಭಂಡಾರಿ, ಸಿ.ಪಿ. ಉಷಾರಾಣಿ,ಬಿ.ವೈ. ವಿನೋದಾ,ಸುಬ್ರಮಣ್ಯ ಕುಕ್ಕೆ,ಅಮ್ರಿತ ವಿಮಲನಾಥನ್ ಹಾಗೂಪಿ. ದಿನೇಶ್ ಮಗರ್ ಅವರು ಆಯ್ಕೆಯಾಗಿದ್ದಾರೆ.ನೂತನ ಆಡಳಿತ ಮಂಡಳಿ ಮುಂದಿನ 3 ವರ್ಷ ಕಾರ್ಯನಿರ್ವಹಿಸಲಿದೆ ಎಂದು ಚುನಾವಣಾಧಿಕಾರಿ ಗಗನ ಕೆ. ತಿಳಿಸಿದ್ದಾರೆ.
‘ವಿನ್ಯಾಸ ಕಾಲೇಜು ನಿರ್ಮಾಣ’
‘ಮೂರು ವರ್ಷಗಳ ಅವಧಿಯಲ್ಲಿ ಪರಿಷತ್ತಿನಿಂದ ಬೆಂಗಳೂರಿನಲ್ಲಿ ಕಲೆ ಮತ್ತು ವಿನ್ಯಾಸ ಕಾಲೇಜು ನಿರ್ಮಾಣ ಮಾಡಬೇಕೆಂಬ ಕಾರ್ಯಯೋಜನೆಯಿದೆ. ಕಲೆಗೆ ಸಂಬಂಧಿಸಿದಂತೆ ದೇಶದಲ್ಲಿ ಒಂದೇ ಸಂಜೆ ಕಾಲೇಜು ಇದೆ. ಪರಿಷತ್ತಿನ ಈ ಸಂಜೆ ಕಾಲೇಜಿನ ಕಾರ್ಯವ್ಯಾಪ್ತಿ ವಿಸ್ತರಿಸಿ, ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು. ಇನ್ನಷ್ಟು ಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುವುದು. ನವದೆಹಲಿಯಲ್ಲಿ ನಡೆಯುವ ಕಲಾ ಉತ್ಸವದ ಮಾದರಿ ಇಲ್ಲಿಯೂ ಉತ್ಸವ ನಡೆಸುವ ಪ್ರಯತ್ನ ಮಾಡುತ್ತೇನೆ’ ಎಂದು ಬಿ.ಎಲ್. ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪರಿಷತ್ತಿನ ವಸ್ತು ಸಂಗ್ರಹಾಲಯವನ್ನು ಮೇಲ್ದರ್ಜೆಗೆ ಏರಿಸಿ, ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲಾಗುವುದು. ಬಡ ಕಲಾವಿದರಿಗೆ ರಿಯಾಯತಿ ದರದಲ್ಲಿ ಗ್ಯಾಲರಿಗಳನ್ನು ಒದಗಿಸಲಾಗುವುದು. ಚಿತ್ರಕಲಾ ಪರಿಷತ್ತನ್ನು ಪ್ರಮುಖ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾರ್ಪಾಡು ಮಾಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.