ADVERTISEMENT

ನ್ಯೂಯಾರ್ಕ್‌ ‘ದ ಎಡ್ಜ್’ ಸ್ಕೈ ಡೆಕ್ ವೀಕ್ಷಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 14:16 IST
Last Updated 15 ಸೆಪ್ಟೆಂಬರ್ 2024, 14:16 IST
ನ್ಯೂಯಾರ್ಕ್ ನಗರದ ಹಡ್ಸನ್ ಯಾರ್ಡ್ಸ್‌ನಲ್ಲಿರುವ ‘ದ ಎಡ್ಜ್’ ಸ್ಕೈ ಡೆಕ್‌ನ್ನು  ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವೀಕ್ಷಿಸಿದರು
ನ್ಯೂಯಾರ್ಕ್ ನಗರದ ಹಡ್ಸನ್ ಯಾರ್ಡ್ಸ್‌ನಲ್ಲಿರುವ ‘ದ ಎಡ್ಜ್’ ಸ್ಕೈ ಡೆಕ್‌ನ್ನು  ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವೀಕ್ಷಿಸಿದರು   

ನ್ಯೂಯಾರ್ಕ್: ಪ್ರವಾಸಿಗರ ಆಕರ್ಷಣೆಗಾಗಿ ಬೆಂಗಳೂರಿನಲ್ಲಿ ಸ್ಕೈ ಡೆಕ್ ನಿರ್ಮಿಸಲು ಯೋಜನೆ ರೂಪಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಮೆರಿಕ ಪ್ರವಾಸದ ವೇಳೆ ನ್ಯೂಯಾರ್ಕ್ ನಗರದ ಹಡ್ಸನ್ ಯಾರ್ಡ್ಸ್‌ನಲ್ಲಿರುವ ‘ದ ಎಡ್ಜ್’ ಸ್ಕೈ ಡೆಕ್‌ಗೆ ಭೇಟಿ ನೀಡಿ ಅದರ ವಾಸ್ತುಶಿಲ್ಪ, ವಿನ್ಯಾಸವನ್ನು ವೀಕ್ಷಿಸಿದರು.

ಹಡ್ಸನ್ ಯಾರ್ಡ್ಸ್ 30 ವೆಸ್ಟರ್ನ್ ಹೆಮಿಸ್ಫರ್‌ನಲ್ಲಿರುವ ಕಟ್ಟಡದ 100ನೇ ಮಹಡಿಯಲ್ಲಿ 7,500 ಚದರ ಅಡಿಯ ಈ ಡೆಕ್ ಅನ್ನು ಪತ್ನಿ ಉಷಾ ಜೊತೆ ಶಿವಕುಮಾರ್ ಅವರು ವೀಕ್ಷಿಸಿದರು. ಈ ಡೆಕ್ ಫ್ಲೋರ್‌ನಿಂದ ಹಿಡಿದು ಸೀಲಿಂಗ್‌ವರೆಗೂ ಪಾರದರ್ಶಕ ಗಾಜಿನಿಂದ ಕೂಡಿದ್ದು, ಇದು ನ್ಯೂಯಾರ್ಕ್ ನಗರದ ವಿಹಂಗಮ ನೋಟಕ್ಕೆ ವೇದಿಕೆಯಾಗಿದೆ.

ಬೆಂಗಳೂರಿನ ಸ್ಕೈ ಡೆಕ್ ನಿರ್ಮಾಣ ವಿಚಾರವಾಗಿ ಶಿವಕುಮಾರ್ ಅವರು ಖ್ಯಾತ ವಾಸ್ತುಶಿಲ್ಪ ವಿನ್ಯಾಸಗಾರ ಬಾಬು ಕೀಲಾರ ಜೊತೆ ಚರ್ಚಿಸಿದರು. ಶಿವಕುಮಾರ್ ಅವರು ಕೀಲಾರ ಅವರ ಜತೆ ಹಡ್ಸನ್ ಯಾರ್ಡ್ ಸೇರಿದಂತೆ ಹಲವು ಸ್ಕೈ ಡೆಕ್ ಗಗನಚುಂಬಿ ಕಟ್ಟಡಗಳನ್ನೂ ಪರಿಶೀಲಿಸಿದರು.

ADVERTISEMENT

ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಕಟ್ಟಡ, ಚೀನಾದ ಶಾಂಘೈ ಟವರ್, ದುಬೈನ ಬುರ್ಜ್ ಖಲೀಫಾದ ವಿನ್ಯಾಸ ಮಾಡಿರುವ ವಾಸ್ತುಶಿಲ್ಪ ವಿನ್ಯಾಸಗಾರ ಕೆನ್ನೆತ್ ಡ್ರಕರ್ ಅವರ ಜತೆಗೂ ಶಿವಕುಮಾರ್ ‌ಚರ್ಚೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.