ಬೆಂಗಳೂರು: ನಗರದಲ್ಲಿ ದೇಶದ ಅತ್ಯಂತ ಎತ್ತರದ ವೀಕ್ಷಣಾ ಗೋಪುರ ತಲೆ ಎತ್ತಲಿದೆ. ಸದ್ಯ ಇದು ಪರಿಶೀಲನೆಯ ಹಂತದಲ್ಲಿದೆ.
ಉನ್ನತ ಸ್ಕೈ ಡೆಸ್ಕ್ ಯೋಜನೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರಿಶೀಲನೆ ನಡೆಸಿದ್ದಾರೆ. ವೀಕ್ಷಣಾ ಗೋಪುರ ನಿರ್ಮಾಣಕ್ಕೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಇದರ ಆರ್ಥಿಕ ಕಾರ್ಯಸಾಧ್ಯತೆಯನ್ನು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಆಸ್ಟ್ರಿಯಾ ಮೂಲದ COOP HIMMELB(L)AU ಸಂಸ್ಥೆ ಹಾಗೂ ವರ್ಲ್ಡ್ ಡಿಸೈನ್ ಆರ್ಗನೈಸೇಶನ್ ಸಹಕಾರದೊಂದಿಗೆ ವೀಕ್ಷಣಾ ಗೋಪುರ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇದು ನಿರ್ಮಾಣವಾದರೆ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ. ಯೋಜನೆಯ ಅನುಷ್ಠಾನಕ್ಕೆ 8ರಿಂದ 10 ಎಕರೆ ಭೂಮಿ ಅಗತ್ಯವಿದೆ’ ಎಂದು ಬರೆದುಕೊಂಡಿದ್ದಾರೆ.
ಸದ್ಯ ಜಗತ್ತಿನಲ್ಲಿ ದುಬೈನ ಬುರ್ಜ್ ಖಲೀಫಾ (828 ಮೀಟರ್), ಶಾಂಘಾಯ್‌ನ ಶಾಂಘೈ ಟವರ್ (632 ಮೀಟರ್), ಚೀನಾದ ಶೆಂಜೆನ್‌ನ ಪಿಂಗ್ ಆನ್ ಫೈನಾನ್ಸ್ ಸೆಂಟರ್ (599 ಮೀಟರ್), ಚೀನಾದ ಗುಂವಾಂಗ್ಶುವಿನ ಕ್ಯಾಂಟನ್ ಟವರ್ (597 ಮೀಟರ್), ದಕ್ಷಿಣ ಕೊರಿಯಾದ ಲಾಟ್ಟೆ ವರ್ಲ್ಡ್ ಟವರ್ (555 ಮೀಟರ್) ವಿಶ್ವದ ಎತ್ತರದ ವೀಕ್ಷಣಾ ಗೋಪುರಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.