ಬೆಂಗಳೂರು: ‘ಅಧಿಕಾರದಲ್ಲಿ ಇದ್ದವರನ್ನು ಹೊಗಳಿ ಸರ್ವಾಧಿಕಾರಿ ಮಾಡುವ ಭಟ್ಟಂಗಿತನವೇ ಭಾರತದ ಬಹುದೊಡ್ಡ ಕಾಯಿಲೆ’ ಎಂದು ಚಿಂತಕ ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.
ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಈಚೆಗೆ ಬಿಎಂಎಸ್ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಆಯೋಜಿಸಿದ್ದ ‘ಲಂಕೇಶರ ನಾಟಕಗಳು: ವಿಶೇಷ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಧಿಕಾರದಲ್ಲಿ ಇದ್ದವರನ್ನು ಹೊಗಳುತ್ತಾ ಹೋದರೆ, ಅವರು ಸರ್ವಾಧಿಕಾರಿಯಾಗಿ ಪರಿವರ್ತನೆಯಾಗುತ್ತಾರೆ. ಒಮ್ಮೆ ಸರ್ವಾಧಿಕಾರಿಯಾಗಿ ಬೆಳೆದರೆ ಅವರಿಂದ ಅಪಾಯವೇ ಹೆಚ್ಚು. ಆದ್ದರಿಂದ ಹೊಗಳಿಕೆ ಕಾಯಿಲೆಯಿಂದ ಭಾರತೀಯರು ಹೊರಬರಬೇಕಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.