ರಾಜರಾಜೇಶ್ವರಿ ನಗರ: ಹಳ್ಳಿಗರು, ರೈತರು, ಕೂಲಿ ಕಾರ್ಮಿಕರು ವ್ಯಾವಹಾರಿಕ ಭಾಷೆಯಾಗಿ ಕನ್ನಡವನ್ನು ಬಳಸುತ್ತಿರುವುದರಿಂದಲೇ ಕನ್ನಡ ಉಳಿದಿದ್ದು, ನಗರ ಪ್ರದೇಶದಲ್ಲಿಯೂ ಇಂಥದ್ದೇ ವಾತಾವರಣ ನಿರ್ಮಾಣವಾಗಬೇಕಿದೆ’ ಎಂದು ಅರ್ಪಿತ ಸೇವಾ ಟ್ರಸ್ಟ್ ಅಧ್ಯಕ್ಷ ಲಗ್ಗೆರೆ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಲಗ್ಗೆರೆ ಬಿಬಿಎಂಪಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಕನ್ನಡ ನೃತ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
’ಸರ್ಕಾರದ ವಿವಿಧ ಇಲಾಖೆಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ, ಸಿಬ್ಬಂದಿ ವರ್ಗ ಕನ್ನಡದಲ್ಲೇ ಮಾತನಾಡುತ್ತಾ, ಕನ್ನಡ ಭಾಷೆಯಲ್ಲೇ ವ್ಯವಹರಿಸುವ ಮೂಲಕ ಭಾಷೆ ಸಂಸ್ಕೃತಿ ಪರಂಪರೆ ಉಳಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.
‘ಕನ್ನಡ ನೆಲದಲ್ಲಿ ಉದ್ಯೋಗ ಮಾಡುತ್ತ ಬದುಕು ಕಟ್ಟಿಕೊಂಡಿರುವ ಹಾಗೂ ಉದ್ಯಮ ಸ್ಥಾಪಿಸಿ ಇಲ್ಲೇ ನೆಲೆಸಿರುವ ಅನ್ನ ಭಾಷಿಕರು ಕನ್ನಡವನ್ನು ಕಲಿತು ವ್ಯವಹರಿಸುವ ಮೂಲಕ ಕನ್ನಡದ ನೆಲದ ಋಣ ತೀರಿಸಬೇಕು’ ಎಂದರು.
ಮುಖ್ಯ ಶಿಕ್ಷಕ ವೆಂಕಟರಾಯಪ್ಪ, ಹಿರಿಯ ಶಿಕ್ಷಕಿ ಪುಷ್ಪವತಿ ಎಸ್.ಸಿ ಅವರು ಮಾತನಾಡಿದರು. ಇದೇ ವೇಳೆ ಶಾಲಾ ಮಕ್ಕಳು ಕನ್ನಡ ಭಾಷೆಗೆ ಸಂಬಂಧಿಸಿದ ಸಾಹಿತ್ಯವಿರುವ ಗೀತೆಗಳಿಗೆ ನೃತ್ಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.