ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನಲ್ಲಿ (ಕೆಎಸ್‌ಬಿಸಿ) ಈ ಬಾರಿ 2,103 ಎಲ್ಎಲ್‌ಬಿ ಪದವೀಧರರು ಸನ್ನದು ನೋಂದಣಿ ಮಾಡಿಸಿಕೊಳ್ಳುವ ಮೂಲಕ 64 ವರ್ಷಗಳ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
‘ಕಾನೂನು ಪದವಿ ಹೊಂದಿರುವ ಪದವೀಧರರ ವಕೀಲಿಕೆ ಸನ್ನದು ನೋಂದಣಿ ಇದೇ 22ರಂದು ಕೆಎಸ್‌ಬಿಸಿ ವತಿಯಿಂದ ನಡೆಯಿತು. ಈ ಬಾರಿ ದಾಖಲೆಯ ನೋಂದಣಿ ಆಗಿದೆ. ಈ ಪದವೀಧರರಲ್ಲಿ ಶೇ 40ರಷ್ಟು ಮಹಿಳೆಯರು ಮತ್ತು ಉಳಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂದು ಕೆಎಸ್‌ಬಿಸಿ ನೋಂದಣಿ ಸಮಿತಿ ಸದಸ್ಯ ವಕೀಲ ಎಸ್.ಹರೀಶ್ ತಿಳಿಸಿದ್ದಾರೆ.
‘ನ್ಯಾಯಾಂಗ, ಕಾರ್ಪೊರೇಟ್ ಮತ್ತು ಸರ್ಕಾರಿ ವಲಯಗಳಲ್ಲಿ ವಕೀಲರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತಿರುವ ಕಾರಣ ಯುವ ಸಮೂಹ ಈ ಕ್ಷೇತ್ರದತ್ತ ಒಲವು ತೋರುತ್ತಿದೆ’ ಎಂದು ಹರೀಶ್ ಹೇಳಿದ್ದಾರೆ.
ವಕಾಲತ್ತಿಗೆ ಸಹಿ ಮಾಡಿ ಕೋರ್ಟ್‌ಗಳಲ್ಲಿ ಹಾಜರಾಗಲು ಅವಶ್ಯವಾದ ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಶೀಘ್ರವೇ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.