ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ 100 ದಿನಗಳ ‘ಉದ್ಯೋಗ ಖಾತರಿ ಉಳಿಸಿ' ಹೋರಾಟದಲ್ಲಿ ಕರ್ನಾಟಕ ಕೂಲಿಕಾರರು ಶುಕ್ರವಾರ ಭಾಗವಹಿಸಿದರು.
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡಿರುವುದು, ಕೂಲಿಕಾರರ ಹಾಜರಿಯ ಡಿಜಿಟಲೀಕರಣ ಮತ್ತು ಇತ್ತೀಚೆಗೆ ಜಾರಿಯಲ್ಲಿ ತಂದಿರುವ ಆಧಾರ್ ಆಧರಿತ ಸಂಬಳ ನೀಡಿಕೆ ವ್ಯವಸ್ಥೆಯನ್ನು ವಿರೋಧಿಸಿ ಜಂತರ್ ಮಂತರ್‌ನಲ್ಲಿ ಫೆಬ್ರುವರಿ 13ರಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಕರ್ನಾಟಕದಿಂದ ಹೋರಾಟಗಾರರಾದ ಶಾರದಾ ಗೋಪಾಲ, ದು.ಸರಸ್ವತಿ ನೇತೃತ್ವದಲ್ಲಿ ಕೂಲಿಕಾರರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.