ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ನಿರ್ಧಾರ ಕೈಗೊಂಡಿರುವುದನ್ನು ಮಲೆನಾಡು ಕರಾವಳಿ ಜನಪರ ಒಕ್ಕೂಟ ಸ್ವಾಗತಿಸಿದೆ.
‘10 ವರ್ಷಗಳಲ್ಲಿ ಅನೇಕ ಬಾರಿ ಕೇಂದ್ರ ಸರ್ಕಾರವು ಕರಡು ಅಧಿಸೂಚನೆ ಹೊರಡಿಸುವ ಮೂಲಕ ಮಲೆನಾಡು ಮತ್ತು ಕರಾವಳಿಯ ಜನರ ನಿದ್ದೆಗೆಡಿಸಿದೆ. ಕೇಂದ್ರ ಪರಿಸರ ಇಲಾಖೆಯು ಕಳೆದ ಬಾರಿ ಕರೆದ ಸಭೆಗೆ ಮಲೆನಾಡು–ಕರಾವಳಿ ಭಾಗದ ಯಾವ ಸಂಸದರೂ ಭಾಗವಹಿಸದೇ ಇರುವುದು ವಿಪರ್ಯಾಸ. ಕ್ಷೇತ್ರದ ಕಾಳಜಿ ಇಲ್ಲದ ಸಂಸದರೇ ಆಯ್ಕೆಯಾಗುತ್ತಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ’ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.