ADVERTISEMENT

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರಂಭವಾಗದ 2ನೇ ರನ್‌ವೇ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 19:39 IST
Last Updated 5 ಡಿಸೆಂಬರ್ 2019, 19:39 IST
ಹೊಸ ರನ್‌ವೇ ಬಳಿ ತಪಾಸಣೆ ನಿರತ ಭದ್ರತಾ ಸಿಬ್ಬಂದಿ– ಪ್ರಜಾವಾಣಿ ಚಿತ್ರ
ಹೊಸ ರನ್‌ವೇ ಬಳಿ ತಪಾಸಣೆ ನಿರತ ಭದ್ರತಾ ಸಿಬ್ಬಂದಿ– ಪ್ರಜಾವಾಣಿ ಚಿತ್ರ   

ಬೆಂಗಳೂರು: ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಕೆಐಎ) ನೂತನವಾಗಿ ನಿರ್ಮಿಸಲಾಗಿರುವ ಎರಡನೇ ರನ್‌ವೇ ಗುರುವಾರ ಕಾರ್ಯಾರಂಭ ಮಾಡಬೇಕಿತ್ತು.ಆದರೆ, ಕೊನೆಯ ಕ್ಷಣದಲ್ಲಿ ಇದನ್ನು ಮುಂದೂಡಲಾಯಿತು.

ಕೆಐಎಯನ್ನು ನಿರ್ವಹಣೆ ಮಾಡುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆಯ (ಬಿಐಎಎಲ್‌) ಅಧಿಕೃತ ಹೇಳಿಕೆ ಪ್ರಕಾರ, ‘ವಿಮಾನನಿಲ್ದಾಣದ ದಕ್ಷಿಣ ಸಮಾ
ನಾಂತರ ರನ್‌ವೇ ಹಾಗೂ ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ಕಾರ್ಯಾಚರಣೆ ನಿಬಂಧನೆಗಳಿಗೆ ಸಂಬಂಧಿಸಿದ ದಾಖಲೆಪತ್ರ
ಗಳು ಇನ್ನೂ ಸಿದ್ಧಗೊಂಡಿಲ್ಲ. ಹೊಸ ರನ್‌ ವೇ ಕಾರ್ಯಾರಂಭಕ್ಕೆ ಇನ್ನೂ ಪೂರ್ಣ ಪ್ರಮಾಣದ ಅನುಮತಿ ಸಿಕ್ಕಿಲ್ಲ. ಅನುಮತಿ ಸಿಕ್ಕ ಬಳಿಕ ಹೊಸ ರನ್‌ವೇನಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ.’

ರನ್‌ವೇ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳೂ ಸನ್ನದ್ಧವಾಗಿವೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ ಪ್ರಧಾನ ನಿರ್ದೇಶಕರು (ಡಿಜಿಸಿಎ) ರನ್‌ ವೇ ಕಾರ್ಯಾಚರಣೆಗೆ ತಾತ್ವಿಕ ಒಪ್ಪಿಗೆಯನ್ನೂ ನೀಡಿದ್ದಾರೆ. ಆದರೂ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೊದ (ಬಿಸಿಎಎಸ್‌) ಅಂತಿಮ ಅನುಮತಿ ಇನ್ನಷ್ಟೇ ಸಿಗಬೇಕಿದೆ. ಬಿಐಎಎಲ್‌ನ ಉನ್ನತ ಅಧಿಕಾರಿಗಳು ನಿಯಂತ್ರಣ ಪ್ರಾಧಿಕಾರದಿಂದ ಅಂತಿಮ ಅನುಮತಿ ಪಡೆಯುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ADVERTISEMENT

ಇನ್ನು ಒಂದೆರಡು ದಿನಗಳಲ್ಲೇ ಹೊಸ ರನ್‌ವೇನಲ್ಲೂ ಮೊದಲ ವಿಮಾನ ಹಾರಾಟ ಆರಂಭವಾಗಲಿದೆ ಎಂದು ವಿಮಾನನಿಲ್ದಾಣದ ಮೂಲಗಳು ತಿಳಿಸಿವೆ. ಇಲ್ಲಿ ಎರಡು ಕ್ರಾಸ್‌ ಟ್ಯಾಕ್ಸಿವೇಗಳಲ್ಲಿ ಒಂದು ಮಾತ್ರ ಸಜ್ಜಾಗಿರುವುದರಿಂದ ಸದ್ಯಕ್ಕೆ ನಿರ್ಗಮನಕ್ಕೆ ಮಾತ್ರ ಅನುಮತಿ ಸಿಗಬಹುದು. ಎರಡನೇ ಟ್ಯಾಕ್ಸಿವೇ ಡಿಸೆಂಬರ್‌ ಅಂತ್ಯದೊಳಗೆ ಅಥವಾ 2019ರ ಜನವರಿ ಮೊದಲ ವಾರದೊಳಗೆ ಪೂರ್ಣಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.