ADVERTISEMENT

ದುಬಾರಿ ಆಗಲಿದೆ ಏರ್‌ಪೋರ್ಟ್‌ ಟ್ಯಾಕ್ಸಿ ಸೇವೆ?

ವಿವಿಧ ಖಾಸಗಿ ಕ್ಯಾಬ್‌ ಕಂಪನಿಗಳ ಒಪ್ಪಂದ ಕರಾರು ನವೀಕರಣ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 23:33 IST
Last Updated 23 ಆಗಸ್ಟ್ 2024, 23:33 IST
   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ವಿವಿಧ ಖಾಸಗಿ ಕ್ಯಾಬ್‌ ಕಂಪನಿಗಳು ಹೊಂದಿರುವ ಒಪ್ಪಂದದ ಕರಾರು ನವೀಕರಣಗೊಳ್ಳಲಿದೆ. ಹಾಗಾಗಿ ಟ್ಯಾಕ್ಸಿ ಸೇವೆ ಶುಲ್ಕ ಹೆಚ್ಚಾಳ ಆಗುವ ಸಾಧ್ಯತೆ ಇದೆ.

ಒಪ್ಪಂದಲ್ಲಿ ಪಿಕ್‌ಆಪ್‌ ಶುಲ್ಕ ಸೇರಿದಂತೆ ಇತರ ಶುಲ್ಕ ಹೆಚ್ಚಳವಾಗುತ್ತಿರುವುದರಿಂದ ನಗರದ ವಿವಿಧೆಡೆಗಳಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ಮಾಡುವ ಓಲಾ, ಉಬಲ್‌, ಕೆಎಸ್‌ಟಿಡಿಸಿ ಸೇರಿದಂತೆ ಇತರ ಕ್ಯಾಬ್‌ಗಳ ಸೇವೆಯೂ ದುಬಾರಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣಕ್ಕೆ ಬರುವ ಗ್ರಾಹಕರು ಪ್ರಯಾಣ ಶುಲ್ಕದೊಂದಿಗೆ ಟ್ಯಾಕ್ಸ್‌, ಕಮಿಷನ್‌, ವಿಮಾನ ನಿಲ್ದಾಣ ವಿಧಿಸುವ ಶುಲ್ಕ ಸೇರಿ ಬಿಲ್‌ ಪಾವತಿಸಬೇಕಾಗಿದೆ. ಈಗಾಗಲೇ ಉಬರ್‌ ಕ್ಯಾಬ್‌ ಕಂಪನಿಯು ಗ್ರಾಹಕರಿಗೆ ಈ ಮಾಹಿತಿ ಒದಗಿಸುತ್ತಿದೆ.

ADVERTISEMENT

ಕೆಎಸ್‌ಟಿಡಿಸಿ, ಓಲಾ, ರಿಪೆಕ್ಸ್‌ ಮೊಬಲಿಟಿ, ಡಬ್ಲ್ಯೂಟಿಐ, ಸಿಒಆರ್‌ ಸೇರಿದಂತೆ ಇತರ ಕಂಪನಿಗಳು ವಿಮಾನ ನಿಲ್ದಾಣದೊಂದಿಗೆ ಹೊಂದಿರುವ ಒಪ್ಪಂದವೂ ಸೆಪ್ಟೆಂಬರ್ 31ರೊಳಗೆ ನವೀಕರಣ ಆಗಲಿದೆ. ನಂತರ ಕಂಪನಿಗಳ ಟ್ಯಾಕ್ಸಿ ಸೇವೆಯೂ ದುಬಾರಿ ಆಗಲಿದೆ ಎನ್ನುವ ಮಾಹಿತಿ ಇದೆ.

ಟೆಂಡರ್‌ ಮೂಲಕ ಟ್ಯಾಕ್ಸಿ ನಿಲ್ದಾಣ ನಿರ್ಧಾರ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣದ ಟರ್ಮಿನಲ್‌-1 ಹಾಗೂ ಟರ್ಮಿನಲ್‌-2ರಲ್ಲಿ ವಿವಿಧ ಟ್ಯಾಕ್ಸಿ ಅಗ್ರಿಗೇಟರ್ ಕಂಪನಿಗಳು ಟೆಂಡರ್‌ ಮೂಲಕ ಅವರ ಟ್ಯಾಕ್ಸಿ ನಿಲ್ದಾಣದ ಜಾಗ ಪಡೆದುಕೊಳ್ಳಲಿದ್ದು, ಕಂಪನಿ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಅವರ ಸೇವೆಗೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ವಕ್ತಾರರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.