ADVERTISEMENT

ಕೋಡಿ ಬಿದ್ದ ರಾಮಸಂದ್ರ, ಹಿರೇಕೆರೆ: ಕೆಂಪೇಗೌಡ ಬಡಾವಣೆ 3ನೇ ಹಂತ ಜಲಾವೃತ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 15:53 IST
Last Updated 20 ಅಕ್ಟೋಬರ್ 2024, 15:53 IST
ಜಲಾವೃತಗೊಂಡಿರುವ ಬೃಂದಾವನ ಲೇಔಟ್‌
ಜಲಾವೃತಗೊಂಡಿರುವ ಬೃಂದಾವನ ಲೇಔಟ್‌   

ಕೆಂಗೇರಿ: ಸೂಲಿಕೆರೆ ಪಂಚಾಯಿತಿ ವ್ಯಾಪ್ತಿಯ ರಾಮಸಂದ್ರ ಹಾಗೂ ಹಿರೇಕೆರೆ ಕೋಡಿ ಬಿದ್ದ ಪರಿಣಾಮ ಕೆಂಪೇಗೌಡ ಬಡಾವಣೆಯ ಮೂರು ಮತ್ತು ನಾಲ್ಕನೇ ಹಂತದ ಪ್ರದೇಶಗಳು ಜಲಾವೃತಗೊಂಡವು.

ಕೆಂಪೇಗೌಡ ಬಡಾವಣೆಯ 3ನೇ ಹಂತದಲ್ಲಿ ರಾಜಕಾಲುವೆ ಮೇಲೆ ನಿರ್ಮಿಸಿರುವ ಸೇತುವೆಯ ಮೇಲೂ ನೀರು ಹರಿಯುತ್ತಿದ್ದ ಪರಿಣಾಮ ಸೂಲಿಕೆರೆ, ರಾಮೋಹಳ್ಳಿ, ತಾವರೆಕೆರೆ ಕಡೆ ಸಾಗಬೇಕಿದ್ದ ವಾಹನ ಸವಾರರು ಬದಲಿ ಮಾರ್ಗ ಆಶ್ರಯಿಸುವಂತಾಯಿತು.

ಮಧ್ಯಾಹ್ನದವರೆಗೂ ಮಳೆ ನೀರಿನ ಪ್ರಮಾಣ ಕಡಿಮೆಯಾಗದೆ ಸುತ್ತಮುತ್ತಲ ಜಮೀನಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ಸರಾಗವಾಗಿ ಸಾಗಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹರೀಶ್ ದೂರಿದರು.

ADVERTISEMENT
ಕೆಂಪೇಗೌಡ ಲೇಔಟ್‌ 3ನೇ ಹಂತದಲ್ಲಿ ಮೋರಿ ಮೇಲಿನ ಸೇತುವೆಯಲ್ಲಿ ನೀರು ಹರಿಯುತ್ತಿರುವುದು

ಭಾನುವಾರ ಮುಂಜಾನೆ ಸುರಿದ ಭಾರಿ ಮಳೆಗೆ ದುಬಾಸಿಪಾಳ್ಯ ಕೆರೆ ಬಳಿಯ ಬೃಂದಾನ ಲೇಔಟ್ ಅಕ್ಷರಶಃ ದ್ವೀಪವಾಗಿ ಮಾರ್ಪಟ್ಟಿತ್ತು. ಹತ್ತಾರು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಡಿಯಾಯಿತು.

ರಸ್ತೆ ಬದಿಯ ಹೋಟೆಲ್‌ ಹಾಗೂ ಕಿರಾಣಿ ಅಂಗಡಿ ಸೇರಿದಂತೆ ಹಲವು ಕಾರುಗಳ ಒಳಗೆ ನೀರು ನುಗ್ಗಿದೆ. ಮಳೆ ನೀರಿನೊಂದಿಗೆ ಹಾವೊಂದು ಮನೆಯ ಅಂಗಳ ಸೇರಿದ ಪ್ರಸಂಗವೂ ನಡೆಯಿತು. ಲೇಔಟ್‌ನ ಕೆಲ ಭಾಗಗಳಲ್ಲಿ ಸುಮಾರು ಎರಡರಿಂದ ಮೂರು ಅಡಿಯವರೆಗೂ ನೀರು ನಿಂತ ಪರಿಣಾಮ ದ್ವಿಚಕ್ರ ಹಾಗೂ ಕಾರುಗಳಿಗೆ ಹಾನಿಯಾಗಿದೆ. 

ದುಬಾಸಿ ಪಾಳ್ಯ ಕೆರೆ ಸಮೀಪದಲ್ಲಿರುವ ಬೃಂದಾವನ ಲೇಔಟ್ ಜಲಾವೃತಗೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.