ADVERTISEMENT

ಬೆಂಗಳೂರಿನ ಕೆಂಪೇಗೌಡ ಕಾಲೇಜು: 100 ಹೆಚ್ಚುವರಿ ವೈದ್ಯಕೀಯ ಸೀಟು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 22:52 IST
Last Updated 10 ಅಕ್ಟೋಬರ್ 2024, 22:52 IST
   

ಬೆಂಗಳೂರು: ಇಲ್ಲಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಹೊಸದಾಗಿ 100 ಸೀಟುಗಳು ಲಭ್ಯವಿದ್ದು, ಅವುಗಳ ಹಂಚಿಕೆಗೆ ಸರ್ಕಾರ ಆದೇಶಿಸಿದೆ. ಈ ಕಾಲೇಜಿಗೆ ಮಾತ್ರ ಅನ್ವಯವಾಗುವಂತೆ ಹೊಸದಾಗಿ ಆಯ್ಕೆ ನಮೂದಿಸಲು ಅ. 14ರ ರಾತ್ರಿ 11.59 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಈಗಾಗಲೇ ಬೇರೆ ಕಾಲೇಜುಗಳಲ್ಲಿ ಸೀಟು ಪಡೆದವರು ಹಾಗೂ ಸೀಟು ಹಂಚಿಕೆಯಾಗದವರೂ ‘ಆಪ್ಷನ್‌’ ಎಂಟ್ರಿ ಮಾಡುವ ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಕೆಇಎ ಹೇಳಿದೆ.

ಈಗಾಗಲೇ ಶುಲ್ಕ ಪಾವತಿಸಿ ವೈದ್ಯಕೀಯ ಮಾಪ್‌ಅಪ್ ಸುತ್ತಿನಲ್ಲಿ ಭಾಗವಹಿಸುತ್ತಿರುವ ಇತರೆ ಅಭ್ಯರ್ಥಿಗಳು ಸಹ ಕೆಂಪೇಗೌಡ ವೈದ್ಯಕೀಯ ಕಾಲೇಜಿನ ಸೀಟುಗಳಿಗೆ ಆಪ್ಷನ್‌ ನಮೂದಿಸಬಹುದು ಹಾಗೂ ಸೀಟ್‌ಮ್ಯಾಟ್ರಿಕ್ಸ್‌ನಲ್ಲಿ ತೋರಿಸದೆ ಇರುವ ಕಾಲೇಜುಗಳಿಗೂ ಆಪ್ಷನ್‌ ದಾಖಲಿಸಲು ಅವಕಾಶವಿರುತ್ತದೆ. ಮಾಪ್‌ಅಪ್‌ ಸುತ್ತಿಗೆ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿಸಲು ಅ. 14ರವರೆಗೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.