ಬೆಂಗಳೂರು: ಗುತ್ತಿಗೆದಾರರೊಬ್ಬರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ₹5 ಲಕ್ಷ ಸುಲಿಗೆ ಮಾಡಿದ್ದ ಎಂಟು ಆರೋಪಿಗಳನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮಪುರದ ಅರುಣ್, ಪ್ರತಾಪ್, ಅಕ್ರಂ, ಅಖಿಲೇಶ್, ಅನ್ಸರ್, ನವೀನ್, ರೆಹಮಾನ್, ಸೈಯದ್ ಬಕಾಸ್ ಬಂಧಿತರು. ಶ್ರೀರಾಂಪುರದ ಮೊಹಮ್ಮದ್ ಮೂಸಾ ಅವರನ್ನು ಆರೋಪಿಗಳು ಅಪಹರಣ ಮಾಡಿದ್ದರು.
ಮನೆ ನವೀಕರಣ ಮಾಡುವುದಾಗಿ ಕರೆದೊಯ್ದು ನವೀನ್ ನೇತೃತ್ವದಲ್ಲಿ ಅಪಹರಣ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.