ಒರಾಯನ್ ಮಾಲ್‌ನಲ್ಲಿ ಮೇ 12ರವರೆಗೆ ಸಾಗರ-ವಿಷಯದ (ಓಷನ್ ಥೀಮ್ಡ್) ಮಕ್ಕಳ ಸಮ್ಮರ್ ಕಾರ್ನಿವಲ್ ಬ್ರಿಗೇಡ್ ಗೇಟ್ ವೇ ನಡೆಯಲಿದೆ. ಮಕ್ಕಳಿಗೆ ಉಲ್ಲಾಸಕರ, ಅದ್ಭುತ ಸಾಗರ-ವಿಷಯದ ಅಲಂಕಾರ, ಅದ್ಭುತ ಲೈಫ್ ಸೈಜ್ ಗಾತ್ರದ ಅನಿಮ್ಯಾಟ್ರಾನಿಕ್ಸ್, ಅತ್ಯಾಕರ್ಷಕ ಚಟುವಟಿಕೆಗಳು ಮತ್ತು ಎಲ್ಲಾ ವಯಸ್ಸಿನವರಿಗೆ ಮುದ ನೀಡುವ ಕಾರ್ಯಾಗಾರಗಳನ್ನು ಬ್ರಿಗೇಡ್ ಗೇಟ್‌ವೇ ಒಳಗೊಂಡಿದೆ.
ಸೆಂಟ್ರಲ್ ಆಟ್ರಿಯಂನ ಆಕರ್ಷಕ ಅತಿವಾಸ್ತವಿಕ ಸಮುದ್ರದ ಜೀವಿಗಳು, ಬೃಹತ್ ಗಾತ್ರದ ಟವರ್‌ಗಳು, ಶಾರ್ಕ್‌ಗಳು, ದೈತ್ಯ ಆಕ್ಟೋಪಸ್‌ಗಳು, ಸ್ಟ್ರಿಂಗ್ ರೇಸ್‌ಗಳು, ಡಾಲ್ಫಿನ್‌ಗಳು, ಸೀಲ್‌ಗಳು, ಲೈವ್ ಅಕ್ವೇರಿಯಂ ಮತ್ತು ಎಲ್ಲರಿಗೂ ಇಷ್ಟವಾಗುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಸೇರಿದಂತೆ ಇಡೀ ಕುಟುಂಬಕ್ಕೆ ಖುಷಿ ನೀಡುವ ಕಾರ್ಯಕ್ರಮಗಳು ಇಲ್ಲಿವೆ.
ಚಟುವಟಿಕೆಯಿಂದ ತುಂಬಿದ ದಿನವನ್ನು ಎಡಿಎ ಜೊತೆಯಲ್ಲಿ ಟೆರಾರಿಯಂ (ಭಾನುವಾರ, ಏಪ್ರಿಲ್ 28, ಬೆಳಿಗ್ಗೆ 10)ಮತ್ತು ಪ್ಲಾಂಟೆಡ್ ಅಕ್ವೇರಿಯಮ್ಸ್ (ಭಾನುವಾರ ಮೇ 5, ಮಧ್ಯಾಹ್ನ 3ರಿಂದ 6ರವರೆಗೆ)ಪ್ರಕೃತಿ ಕಾರ್ಯಾಗಾರ ನಡೆಯಲಿದೆ.
ಸುಂದರ ಮಿನಿಯೇಚರ್ ಭೂದೃಶ್ಯಗಳನ್ನು ಮರುಸೃಷ್ಟಿಸಲು ಮತ್ತು ತಮ್ಮ ಮನೆಗಳನ್ನು ಹೇಗೆ ಅಲಂಕರಿಸಬಹುದು ಎಂಬುದನ್ನು ಕಲಿಯಬಹುದು. ಅಕ್ರಿಲಿಕ್ ಚಿತ್ರಕಲೆ ಮತ್ತು ಫ್ರಿಜ್ ಮ್ಯಾಗ್ನೆಟ್ ಮೇಕಿಂಗ್‌ನ ವಿಶೇಷ ಕಾರ್ಯಾಗಾರಗಳು ನಡೆಯಲಿವೆ. ಸಣ್ಣ ಮಕ್ಕಳು ಸಮುದ್ರ ಜೀವಿಗಳಂತೆ ಅಥವಾ ಕಡಲ್ಗಳ್ಳರಂತೆ ವೇಷ ಧರಿಸಿ ತಮ್ಮ ನೆಚ್ಚಿನ ಸಮುದ್ರ ಪ್ರಪಂಚದ ಪಾತ್ರಗಳೊಂದಿಗೆ ಫೋಟೊ ತೆಗೆದುಕೊಳ್ಳಬಹುದು. ಏಪ್ರಿಲ್ ತಿಂಗಳ ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.
ಬೆಂಗಳೂರಿನ ಮೊದಲ ಈ ರೀತಿಯ ಮಾಂತ್ರಿಕ ಸಾಗರವು ಮಕ್ಕಳಿಗೆ ಸುರಕ್ಷಿತ, ವಾತಾವರಣವನ್ನು ನೀಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.