ADVERTISEMENT

ಕಿಮ್ಸ್‌ನಲ್ಲಿ ಸೀಟು ಆಮಿಷ; ₹10 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:45 IST
Last Updated 16 ಆಗಸ್ಟ್ 2019, 20:45 IST
   

ಬೆಂಗಳೂರು:ನಗರದ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ (ಕಿಮ್ಸ್‌) ಎಂಬಿ ಬಿಎಸ್‌ ಸೀಟು ಕೊಡಿಸುವುದಾಗಿ ಹೇಳಿ ವಿದ್ಯಾರ್ಥಿಯ ಪೋಷಕರಿಂದ ₹ 10 ಲಕ್ಷ ಪಡೆದು ವಂಚಿಸಲಾಗಿದ್ದು, ಆ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಗನಿಗೆ ಸೀಟು ಕೊಡಿಸುವುದಾಗಿ ಹೇಳಿದ್ದ ಗೌತಮ್, ಅಭಿನವ್, ರವಿ ಹಾಗೂ ಇನ್ನಿಬ್ಬರು ಹಣ ಪಡೆದು ವಂಚಿಸಿದ್ದಾರೆ’ ಎಂದು ಹಿಮಾಚಲ ಪ್ರದೇಶದ ರಾಮಕೃಷ್ಣ ಶರ್ಮಾ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ದೂರಿನ ವಿವರ: ‘ನನ್ನ ಮಗ, 2019ನೇ ಸಾಲಿನ ನೀಟ್‌ನಲ್ಲಿ ಉತ್ತೀರ್ಣನಾಗಿದ್ದ. ‘ಎಂಬಿಬಿಎಸ್ ಸೀಟು ಖಾಲಿ ಇದೆ’ ಎಂದು ಮೊಬೈಲ್‌ಗೆ ಸಂದೇಶ ಬಂದಿತ್ತು. ಅದರಲ್ಲಿದ್ದ ಸಂಖ್ಯೆಗೆ ಕರೆ ಮಾಡಿದ್ದೆ. ಕರೆ ಸ್ವೀಕರಿಸಿದ್ದ ಆರೋಪಿ ಗೌತಮ್, ‘ಮಿಸ್‌ಪೈರ್ ಸಲ್ಯೂಷನ್’ ಕಂಪನಿ ವ್ಯವಸ್ಥಾಪಕ ಎಂಬುದಾಗಿ ಪರಿ ಚಯಿಸಿಕೊಂಡಿದ್ದ. ಅಹಮದಾಬಾ ದ್‌ನ ಲ್ಲಿರುವ ಕಂಪನಿ ಕಚೇರಿಗೆ ಬರುವಂತೆ ಹೇಳಿದ್ದ’ ಎಂದು ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಮಗನಿಗೆ ಸೀಟು ಸಿಗುವ ಆಸೆಯಿಂದ ಕಂಪನಿಯ ಕಚೇರಿಗೆ ಹೋಗಿದ್ದೆ. ಬೆಂಗ ಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಸೀಟು ಇರುವುದಾಗಿ ಹೇಳಿದ್ದ ಆರೋಪಿಗಳು, ₹ 35 ಲಕ್ಷ ಪಾವತಿಸಬೇಕೆಂದು ಹೇಳಿದ್ದರು. ಮುಂಗಡವಾಗಿ ₹ 2 ಲಕ್ಷ ಕೊಟ್ಟಿದ್ದೆ.’

‘ಇದೇ 12ರಂದು ನನ್ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಆರೋಪಿಗಳು, ಕಿಮ್ಸ್‌ ಪ್ರತಿನಿಧಿಯನ್ನು ಭೇಟಿ ಮಾಡಿಸುವುದಾಗಿ ಹೇಳಿ ಹಂತ ಹಂತವಾಗಿ ₹ 8 ಲಕ್ಷ ಪಡೆದಿದ್ದರು. ಅದಾದ ನಂತರ ಆರೋಪಿಗಳು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.