ADVERTISEMENT

ಸಾಲುಸಾಲು ಹಬ್ಬಗಳು: ನಂದಿನಿ ಹಾಲು, ಮೊಸರು, ಮಜ್ಜಿಗೆ ದಾಖಲೆ ಮಾರಾಟ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಏಪ್ರಿಲ್‌ ಎರಡನೇ ವಾರದಲ್ಲಿ ಸಾಲುಸಾಲು ಹಬ್ಬಗಳು ಇದ್ದಿದ್ದರಿಂದ ನಂದಿನಿ ಹಾಲು ಮತ್ತು ಮೊಸರು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ. 

‘ಏ.11ರಂದು 51.60 ಲಕ್ಷ ಲೀಟರ್‌ ಹಾಲು ಮತ್ತು ಏ.6ರಂದು 13.56 ಲಕ್ಷ ಲೀಟರ್ ಮೊಸರು ಮಾರಾಟವಾಗಿದೆ. ಇದು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್‌) ಇತಿಹಾಸದಲ್ಲೇ ದಾಖಲೆಯಾಗಿದೆ‘ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್‌ ತಿಳಿಸಿದ್ದಾರೆ.

ಕಳೆದ ಸಾಲಿಗೆ ಹೋಲಿಸಿದರೆ ಪ್ರಸ್ತುತ ಹಾಲು ಮಾರಾಟದ ಪ್ರಗತಿ ಶೇ 10ರಷ್ಟು ಹೆಚ್ಚಾಗಿದೆ. ಮೊಸರಿನ ಮಾರಾಟವೂ ಶೇ 22ರಷ್ಟು ಅಧಿಕವಾಗಿದೆ. ಮಜ್ಜಿಗೆ, ಲಸ್ಸಿಗೆ ಶೇ 30ರಷ್ಟು ಬೇಡಿಕೆ ಹೆಚ್ಚಾಗಿದ್ದು, ದಿನಕ್ಕೆ 1.5 ಲಕ್ಷ ಲೀಟರ್‌ ಮಾರಾಟವಾಗುತ್ತಿದೆ.

ADVERTISEMENT

‘ಕಳೆದ ವರ್ಷದ ಮಾರ್ಚ್‌ ತಿಂಗಳಿಗೆ ಹೋಲಿಸಿದರೆ, ನಂದಿನಿ ಐಸ್‌ಕ್ರೀಂ ಮಾರಾಟ ಶೇ 36ರಷ್ಟು ಹೆಚ್ಚಳವಾಗಿದೆ. ದಿನಕ್ಕೆ ಸರಾಸರಿ 25,439 ಲೀಟರ್‌ ಐಸ್‌ಕ್ರೀಂ ಮಾರಾಟವಾಗುತ್ತಿದ್ದು, ಇದು ಕೂಡಾ ದಾಖಲೆಯಾಗಿದೆ‘ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.