ಕೆ.ಆರ್.ಪುರ: ಇತಿಹಾಸ ಪ್ರಸಿದ್ಧ ಕೋಟೆ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ ಮೇ 18ರಂದು ಜರುಗಲಿದೆ.
ಮಂಗಳವಾರ ವೆಂಕಟರಮಣಸ್ವಾಮಿಗೆ ಅಭಿಷೇಕ, ರಕ್ಷಾಬಂಧನ ಕಳಶ ಸ್ಥಾಪನೆ, ಯಾಗಶಾಲಾ ಪ್ರವೇಶ, ಅಂಕುರಾರ್ಪಣ, ಧ್ವಜಾರೋಹಣ, ಕಲಶಾರ್ಚನೆ ನಡೆಯಿತು. ಬುಧವಾರ ಅಭಿಷೇಕ, ಪೂಜೆ, ಹೋಮ, ಹವನ, ಹೂವಿನ ಅಲಂಕಾರ ಮಹಾಮಂಗಳಾರತಿ ನಡೆದವು.
ಮೇ 16ರಂದು ಅಭಿಷೇಕ, ಗರುಡೋತ್ಸವ, ಮೇ 17ರಂದು ಅಭಿಷೇಕ, ಪೂಜೆ, ಹೋಮ ಹವನ, ಹೂವಿನ ಅಲಂಕಾರ ಗಜೇಂದ್ರ ಮೋಕ್ಷ ಕಾರ್ಯಕ್ರಮ ನಡೆಯಲಿದೆ.
ಶನಿವಾರ ಮಂಗಳ ವಾದ್ಯ, ತಮಟೆವಾದ್ಯ, ವೀರಗಾಸೆ, ಪೂಜಾ ಕುಣಿತ, ಕೀಲು ಕುದುರೆ ಸಕಲ ವಾದ್ಯಗಳೊಂದಿಗೆ ಸಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಬ್ರಹ್ಮ ರಥೋತ್ಸವ ನಡೆಯಲಿದೆ. ಕೆ.ಆರ್. ಪುರ ಸುತ್ತಮುತ್ತಲಿನ ಭಾಗದ ಗ್ರಾಮಸ್ಥರು ಪಾಲ್ಗೊಳ್ಳುವರು ಎಂದು ದೇವಸ್ಥಾನದ ಅಧ್ಯಕ್ಷ ಎಲ್.ಮುನಿಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.