ಬೆಂಗಳೂರು: ‘ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ತಂಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ತಂಡಗಳ ಮಾಲೀಕರು ಕ್ರಿಕೆಟ್‌ಗಿಂತ ಬೆಟ್ಟಿಂಗ್‌ನಲ್ಲೇ ಹೆಚ್ಚು ದುಡ್ಡು ಮಾಡಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಬುಧವಾರ ಮಾತನಾಡಿದ ಅವರು, ‘ಬುಕ್ಕಿಗಳು ಆಟಗಾರರನ್ನು ವಿದೇಶ ಪ್ರವಾಸ ಕಳುಹಿಸುವುದು,ಹನಿಟ್ರಾಪ್‌ನಲ್ಲಿ ಸಿಲುಕಿಸಿ ಅವರನ್ನುಕಟ್ಟಿ ಹಾಕಲಾಗುತ್ತದೆ’ ಎಂದರು.
‘ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಕೆಲವು ಹಿರಿಯ ಕ್ರಿಕೆಟಿಗರು ನಮಗೆ ಹೇಳಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದಿರಿ ಎಂದು ಕೆಎಸ್‌ಸಿಎಗೆ ನಾವು ನೋಟಿಸ್ ಕೊಟ್ಟಿದ್ದೇವೆ. ಆಟಗಾರರು ಎಲ್ಲಿಂದ ಬಂದರು, ಯಾರು ಸೆಲೆಕ್ಷನ್ ಮಾಡಿದರು ಎಂಬ ಮಾಹಿತಿಯನ್ನೂ ಕೇಳಿದ್ದೇವೆ. ಐಪಿಎಲ್ ವರೆಗೂ ತನಿಖೆ ಹೋಗಬಹುದು. ಬಿಸಿಸಿಐ ಕೂಡ ಸಂಪರ್ಕಿಸಿ ಮಾಹಿತಿ ಕೇಳಿದೆ’ ಎಂದರು.
‘ಪ್ರಕರಣದಲ್ಲಿ ಈಗಾಗಲೇ ಏಳು ಜನರ ಬಂದನ ಆಗಿದೆ. ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ’ ಎಂದೂ ಅವರು ವಿವರಿಸಿದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.