ಕೆ.ಆರ್.ಪುರ: ಎರಡು ದಶಕಗಳ ಹಿಂದೆ ನಿರ್ಮಿಸಿರುವ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿರುವುದನ್ನು ಖಂಡಿಸಿ ವರ್ತೂರಿನ ವೇಮನ ಬಡಾವಣೆಯ ನಿವಾಸಿಗಳು ಪ್ರತಿಭಟನೆ ನಡೆಸಿದರು.
‘ಬಡಾವಣೆಯಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಕಾಂಕ್ರೀಟ್ ರಸ್ತೆ ನಿರ್ಮಿಸಿ, ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ, ವ್ಯಕ್ತಿಯೊಬ್ಬರು ತನ್ನ ತಂದೆ ನಿರ್ಮಾಣ ಮಾಡಿರುವ ಬಡಾವಣೆಯ ರಸ್ತೆಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ ರಸ್ತೆ ಬಂದ್ ಮಾಡಿ ತೊಂದರೆ ನೀಡುತ್ತಿದ್ದಾನೆ ’ ಎಂದು ನಿವಾಸಿಗಳು ಆರೋಪಿಸಿದರು.
‘ಕೆಲ ದಿನಗಳಿಂದ ರಸ್ತೆಗೆ ಅಡ್ಡಲಾಗಿ ಕಂಬ ಇಟ್ಟು, ಶಾಲಾ ವಾಹನಗಳು, ನೀರಿನ ಟ್ಯಾಂಕರ್, ಆಂಬುಲೆನ್ಸ್ ಬಾರದಂತೆ ತಡೆದು ತೊಂದರೆ ನೀಡಲಾಗುತ್ತಿದೆ. ಅನಾರೋಗ್ಯ ಯುವಕನ ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್ ಬಡಾವಣೆಗೆ ಬಾರದ ಕಾರಣ ಆತ ಪ್ರಾಣ ಕಳೆದುಕೊಳ್ಳುವಂತಾಯಿತು. ಸಮಸ್ಯೆ ಪರಿಹರಿಸುವಂತೆ ಬಿಬಿಎಂಪಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ಚಂದ್ರಿಕಾ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.