ADVERTISEMENT

ಬೆಂಗಳೂರು: ಲ್ಯಾಪ್‌ಟಾಪ್, ಫೋನ್ ಬಿಟ್ಟು ಪರಾರಿಯಾದ ಪ್ರಯಾಣಿಕ

​ಪ್ರಜಾವಾಣಿ ವಾರ್ತೆ
Published 4 ಮೇ 2022, 16:23 IST
Last Updated 4 ಮೇ 2022, 16:23 IST
   

ಬೆಂಗಳೂರು: ಅನುಮಾನಾಸ್ಪದ ವ್ಯಕ್ತಿಯೊಬ್ಬರು ಬಸ್‌ನಲ್ಲಿ ಏಳು ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಬಿಟ್ಟು ಪರಾರಿಯಾಗಿದ್ದು, ಅವುಗಳನ್ನು ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಸುರಕ್ಷಿತವಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೇ 3ರಂದು ಬೆಂಗಳೂರಿನಿಂದ ವೇಲೂರಿಗೆ ಹೊರಟಿದ್ದ ಬಸ್‌ನಲ್ಲಿ ಆರ್‌.ರವಿಕುಮಾರ್ ಚಾಲಕರಾಗಿದ್ದರೆ, ಬಿ.ಸಿ. ಮಂಜುನಾಥ್ ನಿರ್ವಾಹಕರಾಗಿದ್ದರು. ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮಧ್ಯಾಹ್ನ 2.30ಕ್ಕೆ ಹೊರಟ ಬಸ್‌ನಲ್ಲಿ ಬ್ಯಾಗ್ ಸಹಿತ ಹತ್ತಿದ್ದ ವ್ಯಕ್ತಿಯೊಬ್ಬ ಅಂಬೂರಿಗೆ ಚೀಟಿ ಪಡೆದಿದ್ದರು.

ಕೊನೆಯ ಸೀಟಿನಲ್ಲಿ ಕುಳಿತಿದ್ದ ಈ ವ್ಯಕ್ತಿ ಅನುಮಾನಾಸ್ಪದವಾಗಿ ಕಂಡಿದ್ದರಿಂದ ಬ್ಯಾಗ್ ಪರಿಶೀಲಿಸಲು ನಿರ್ವಾಹಕ ಮುಂದಾದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿ, ಮಡಿವಾಳ ಬಳಿ ಬಸ್ ನಿಲ್ಲಿಸಿದಾಗ ಇಳಿದು ಪರಾರಿಯಾಗಿದ್ದ.

ADVERTISEMENT

ನಂತರ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಏಳು ಲ್ಯಾಪ್‌ಟಾಪ್ ಮತ್ತು ಏಳು ಮೊಬೈಲ್ ಫೋನ್‌ಗಳಿರುವುದು ಕಂಡು ಬಂತು. ಮಂಜುನಾಥ್ ಅವರ ಕರ್ತವ್ಯ ನಿಷ್ಠೆ ಮೆಚ್ಚಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅಭಿನಂದನಾ ಪತ್ರ ನೀಡಿ ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.