ADVERTISEMENT

ಗಾಂಧಿ ಎನ್ನುವ ಕನ್ನಡಿ ತುಂಡಾಗಿದೆ: ಕೆ.ವಿ.ಅಕ್ಷರ

ಉಪನ್ಯಾಸ ಕಾರ್ಯಕ್ರಮದಲ್ಲಿ ಕೆ.ವಿ.ಅಕ್ಷರ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 12:04 IST
Last Updated 18 ಫೆಬ್ರುವರಿ 2019, 12:04 IST
ಕೆ.ವಿ.ಅಕ್ಷರ ಉಪನ್ಯಾಸ ನೀಡಿದರು–ಪ್ರಜಾವಾಣಿ ಚಿತ್ರ
ಕೆ.ವಿ.ಅಕ್ಷರ ಉಪನ್ಯಾಸ ನೀಡಿದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗಾಂಧಿ ಎನ್ನುವ ದೊಡ್ಡ ಕನ್ನಡಿ ತುಂಡಾಗಿದೆ. ಎಲ್ಲಾ ಊರಲ್ಲೂ ಅದರ ತುಂಡುಗಳಿವೆ. ಆ ಸಣ್ಣ ತುಂಡಿನ ಮೂಲಕ ದೊಡ್ಡಗಾಂಧಿಯನ್ನು ಅರ್ಥೈಸಿಕೊಳ್ಳಬಹುದು’ ಎಂದು ಹಿರಿಯ ಚಿಂತಕ ಕೆ.ವಿ.ಅಕ್ಷರ ಹೇಳಿದರು.

ದೇವಗೀತಂ ಚಾರಿಟಬಲ್‌ ಟ್ರಸ್ಟ್‌ ನಗರದಲ್ಲಿ ಭಾನುವಾರ ಆಯೋಜಿಸಿದ್ದ ನಾರಾಯಣ ದತ್ತ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಗಾಂಧಿಯ ಗುರಿಗೆ ಧರಮ್‌ಪಾಲ್‌ ದಾರಿಗಳು’ ಕುರಿತು ಅವರು ಮಾತನಾಡಿದರು.

‘ಗಾಂಧಿ ಸೋತಿದ್ದು, ಗಾಂಧಿಯಿಂದಲ್ಲ, ಗಾಂಧಿ ನಂತರದ ಭಾರತದಿಂದ, ಗಾಂಧಿ ಪ್ರಸ್ತುತಅಪ್ರಾಯೋಗಿಕವಾಗಿ ಕಾಣಲು ಅವರು ಕಾರಣರಲ್ಲ. ನಮ್ಮ ಅಪ್ರಾಯೋಗಿಕ ಜೀವನಶೈಲಿ ಕಾರಣ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ನಜೀರ್ ಸಾಬ್ ಬಳಿಕ ಸ್ವಯಂಆಡಳಿತವನ್ನು ತೆಗೆದು ಹಾಕಿಸ್ಥಳೀಯ ಸಂಸ್ಥೆಗಳನ್ನು ವಿಧಾನಸಭೆಯ ಚಿಕ್ಕ ರೂಪಗಳನ್ನಾಗಿ ಮಾಡಲಾಗಿದೆ. ಅವರು ರೆಸಾರ್ಟ್‌ಗೆ ಹೋದರೆ, ಇವರು ಧರ್ಮಸ್ಥಳಕ್ಕೆ ಹೋಗುತ್ತಾರೆ. ಹಿಂದ್‌ ಸ್ವರಾಜ್ ಹಾಸ್ಯಾಸ್ಪದ ಎನ್ನುವಂತಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.