ADVERTISEMENT

ಕೆರೆಯ ತುಂಬಿದ ಕೊಳೆ; ಜತೆಗೆ ಬೆಳೆದಿದೆ ಕಳೆ

ನಾಗರಬಾವಿ ಕೆರೆಯ ಕಣ್ಣೀರ ಕೋಡಿ: ಸುತ್ತಲೂ ಹಬ್ಬಿದೆ ದುರ್ನಾತ

ಭೀಮಣ್ಣ ಮಾದೆ
Published 16 ಫೆಬ್ರುವರಿ 2019, 19:56 IST
Last Updated 16 ಫೆಬ್ರುವರಿ 2019, 19:56 IST
ಕೆರೆ ಅಂಗಳವನ್ನು ಕಳೆಸಸ್ಯ ಆವರಿಸಿರುವುದು.
ಕೆರೆ ಅಂಗಳವನ್ನು ಕಳೆಸಸ್ಯ ಆವರಿಸಿರುವುದು.   

ಬೆಂಗಳೂರು: ಮೈದುಂಬಿಕೊಂಡು ಸ್ವಚ್ಛವಾಗಿದ್ದಾಗ ಮಕ್ಕಳು ಮಡಿಲಲ್ಲಿ ಆಟವಾಡುತ್ತಿರಲು ಪುಳಕಿತಗೊಳ್ಳುತ್ತಿದ್ದೆ, ಫಸಲು ಚೆನ್ನಾಗಿ ಬಂದುರೈತನ ಮೊಗವರಳಿ ನನಗೆ ನಮಸ್ಕರಿಸುತ್ತಿದ್ದಾಗ, ತಾಯ್ತನದ ಖುಷಿ ಅನುಭವಿಸಿದ್ದೆ, ಈಗ ನನ್ನ ಯಾರೂಕಣ್ಣೆತ್ತಿಯೂ ನೋಡುವುದಿಲ್ಲ...

ರಾಜರಾಜೇಶ್ವರಿಗರವಿಧಾನಸಭಾ ಕ್ಷೇತ್ರದ ಕೊಟ್ಟಿಗೆಪಾಳ್ಯ ವಾರ್ಡ್‌ ವ್ಯಾಪ್ತಿಯನಾಗರಬಾವಿ ಬಡಾವಣೆ ಬಳಿ ಇರುವ ಕೆರೆಯ ಕಣ್ಣೀರಿದು.

ಈ ಕೆರೆ ನಾಗರಬಾವಿ ಬಡಾವಣೆಯ ಹನ್ನೊಂದನೆಬ್ಲಾಕ್‌ನ ಎರಡನೇ ಹಂತದ ಬಳಿ ಮೈಚಾಚಿಕೊಂಡಿದೆ. ಕೊಳಚೆ ನೀರು ಮತ್ತು ಕಳೆಯಿಂದ ಬಡಕಲಾಗಿದೆ. ಹತ್ತಿರದಲ್ಲಿರುವ ಎಂಜಿನಿಯರಿಂಗ್‌ ಕಾಲೇಜಿನ ವಸತಿ ನಿಲಯಗಳಿಂದಹರಿದು ಬರುವಕೊಳಚೆ ನೀರು ಕೆರೆ ಸೇರುತ್ತಿದೆ.ಮಳೆ ನೀರಿನ ಹರಿಯುವಿಕೆಗೆ ನಿರ್ಮಿಸಿದ ಕಾಲುವೆ ಸಹ ಕೊಳಕನ್ನು ಹೊತ್ತು ತಂದು ಕೆರೆಗೆಬಿಡುತ್ತಿದೆ. ಕೆಲ ಜನ ಮನೆಯಿಂದ ನೇರವಾಗಿ ಕೆರೆಗೆ ಕೊಳಚೆ ನೀರು ಬಿಡುತ್ತಿದ್ದಾರೆ. ಆದ್ದರಿಂದ ದುರ್ನಾತ ಬೀರುತ್ತಿದೆ.

ADVERTISEMENT

ಕೆರೆಯ ಸುತ್ತಮುತ್ತ 60 ಮನೆಗಳಿವೆ. ನಿವಾಸಿಗಳಿಗೆ ದುರ್ವಾಸನೆಯನ್ನು ಸಹಿಸಿಕೊಳ್ಳುವುದು ನಿತ್ಯ ಕರ್ಮವಾಗಿದೆ. ವಾಸನೆಯ ಕಾರಣಕ್ಕೆ ಕೆರೆಯ ಹತ್ತಿರಕ್ಕೆ ಒಬ್ಬರೂ ಹೋಗುವುದಿಲ್ಲ.

ಪಕ್ಕದ ಉದ್ಯಾನಕ್ಕೂ ಹಬ್ಬಿದ ವಾಸನೆ: ಕೆರೆಯ ಪಕ್ಕದಲ್ಲಿವರಕವಿ ದ.ರಾ.ಬೇಂದ್ರೆ ಉದ್ಯಾನವಿದೆ. ಕೆರೆಯವಾಸನೆ ಹೊತ್ತ ಗಾಳಿ ಉದ್ಯಾನಕ್ಕೆ ನುಗ್ಗಿ ಅಲ್ಲಿಯ ವಾತಾವರಣವನ್ನು ಹದಗೆಡಿಸುತ್ತಿದೆ. ಅದು ವಾಯುವಿಹಾರಿಗಳನ್ನು ಅತ್ತ ಮುಖ ಹಾಕದಂತೆ ಮಾಡಿದೆ. ಆದ್ದರಿಂದ ಉದ್ಯಾನ ಇದ್ದರೂ ಇಲ್ಲದಂತಿದೆ.

ಆಳೆತ್ತರ ಬೆಳೆದ ಕಳೆ:ಕಾಲೇಜಿನ ವಸತಿ ನಿಲಯದಒಳಚರಂಡಿ ನೀರನ್ನು ಸಂಸ್ಕರಣೆಗೆ ಒಳಪಡಿಸದೇ ಕೆರೆಗೆ ಹರಿಸುತ್ತಿ
ರುವುದರಿಂದ ಕಳೆಗಳು ಆಳೆತ್ತ ರಕ್ಕೆಬೆಳೆದು ನಿಂತಿವೆ. ನೀರು ಕಾಣ ದಂತೆಅಂಗಳವನ್ನುಹುಲ್ಲು ಹಾಗೂ ಕಳೆ ಸಸ್ಯಗಳು ಆವರಿಸಿವೆ.ಹೂಳು ತುಂಬಿಕೊಂಡು ಕಾಡುತ್ತಿದೆ. ಇದರದಲ್ಲಿಯೇ ಬೆರಳೆಣಿಕೆಯಷ್ಟು ಬೆಳ್ಳಕ್ಕಿಗಳು ವಿಹರಿಸುತ್ತವೆ.

ವಿಷಜಂತುಗಳ ಆವಾಸಸ್ಥಾನ:ಕೆರೆಯ ಸುತ್ತಮುತ್ತಲು ದಟ್ಟವಾಗಿ ಗಿಡಗಳು ಬೆಳೆದಿರುವುದರಿಂದ ಕೆರೆಗೆ ತೆರಳಲು ದಾರಿಯಿಲ್ಲ. ಪಕ್ಷಿಗಳಿಗೆ ಆಶ್ರಯ ತಾಣವಾಗಬೇಕಿದ್ದ ಕೆರೆ ವಿಷಜಂತುಗಳ ಆವಾಸ ಸ್ಥಾನವಾಗಿದೆ. ಸೊಳ್ಳೆಗಳನ್ನು ಪೋಷಿಸುತ್ತಿದೆ. ಆದ್ದರಿಂದ ಇಲ್ಲಿಯನಿವಾಸಿಗಳು ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.ಏರಿ ಮತ್ತು ಕೋಡಿ ಕುಸಿದು ಬಿದ್ದಿದ್ದು, ಕೆರೆಯ ಸಂರಚನೆ ಬದಲಾಗಿದೆ.

ಈ ಹಿಂದೆ ಕೆರೆಗೆ ಕಾಯಕಲ್ಪ ನೀಡುವ ಪ್ರಯತ್ನ ನಡೆದಿತ್ತು. ಏರಿ ಮೇಲಿನ ಪೊದೆಗಳನ್ನು ಸ್ವಚ್ಛ ಮಾಡಿಸಿ ನಡುಗೆ ಪಥ ನಿರ್ಮಿಸಿ, ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಲು ಯೋಜಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಸ್ಥಗಿತಗೊಂಡಿದೆ.

ತಮ್ಮ ಬಾಲ್ಯದ ನೆನಪುಗಳ ಪ್ರಧಾನ ಭಾಗವಾದ ಕೆರೆಯನ್ನು ಉಳಿಸಿಕೊಳ್ಳಲು ಇಲ್ಲಿಯ ನಿವಾಸಿಗಳು ಪ್ರಯತ್ನಿಸುತ್ತಿದ್ದಾರೆ. ಎಂಟು ವರ್ಷಗಳಿಂದ ಬೆಂಗಳೂರು ಮಹಾನಗರ ಪಾಲಿಕೆ, ಜಲಮಂಡಳಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಕೊಡುತ್ತಲೇ ಇದ್ದಾರೆ. ಅವರ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.

5 ವರ್ಷಗಳಿಂದಲೂ ಸೇರುತ್ತಿದೆ ಕೊಳಚೆ

ಕಾಲೇಜು ವಸತಿ ನಿಲಯ ಗಳಿಂದ ಹರಿದು ಬರುವ ಕೊಳಚೆನೀರುಐದು ವರ್ಷಗಳಿಂದಲೂ ಕೆರೆಯ ಒಡಲು ಸೇರುತ್ತಿದೆ. ಕೊಳಚೆನೀರು ಶುದ್ಧೀಕರಣ ಘಟಕ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು ಕೇಳುತ್ತಿಲ್ಲ. ಹೋರಾಟವೇ ಮುಂದಿನ ದಾರಿ ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.