ADVERTISEMENT

ಬೆಂಗಳೂರು: ಕೆರೆಗಳ ಸ್ವಚ್ಛತಾ ಅಭಿಯಾನ ಆರಂಭ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:19 IST
Last Updated 8 ಅಕ್ಟೋಬರ್ 2024, 16:19 IST
ಉಲ್ಲಾಳು ಕೆರೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಮಂಗಳವಾರ ಸ್ವಚ್ಛತಾ ಕಾರ್ಯ ನಡೆಸಿದರು
ಉಲ್ಲಾಳು ಕೆರೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಮಂಗಳವಾರ ಸ್ವಚ್ಛತಾ ಕಾರ್ಯ ನಡೆಸಿದರು   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಂಟು ಕೆರೆಗಳಲ್ಲಿ ಸ್ವಚ್ಛತಾ ಅಭಿಯಾನ ಮಂಗಳವಾರ ಆರಂಭವಾಯಿತು.

‘ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ ತಲಾ ಒಂದು ಕೆರೆಯಲ್ಲಿ ಸ್ವಚ್ಛತಾ ಕಾರ್ಯ ಆರಂಭವಾಗಿದ್ದು, ಹಂತ ಹಂತವಾಗಿ ಎಲ್ಲ ಕೆರೆಗಳನ್ನೂ ಸ್ವಚ್ಛಗೊಳಿಸಲಾಗುವುದು’ ಎಂದು ಅರಣ್ಯ, ಪರಿಸರ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್‌ ತಿಳಿಸಿದ್ದಾರೆ.

ಕೆಳಗಿನ ಬೈರಸಂದ್ರ, ನಾಯಂಡಹಳ್ಳಿ, ಗೌಡನಪಾಳ್ಯ, ಕೌದೇನಹಳ್ಳಿ, ದೊರೆಕೆರೆ, ಅಗರ, ಅಮೃತಹಳ್ಳಿ, ಚೊಕ್ಕಸಂದ್ರ ಹಾಗೂ ಉಲ್ಲಾಳು ಕೆರೆಗಳಲ್ಲಿ 175 ಸಿಬ್ಬಂದಿ, 13 ಟ್ರ್ಯಾಕ್ಟರ್ ಹಾಗೂ ನಾಲ್ಕು ಜೆಸಿಬಿಗಳನ್ನು ಬಳಸಿಕೊಂಡು ಸ್ವಚ್ಛತಾ ಕೆಲಸ ಮಾಡಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಅಮೃತಹಳ್ಳಿ, ಕೌದೇನಹಳ್ಳಿ ಹಾಗೂ ಕೆಳಗಿನ ಬೈರಸಂದ್ರ ಕೆರೆಗಳಿಗೆ ಮಂಗಳವಾರ ಭೇಟಿ ನೀಡಿದ್ದ ಪ್ರೀತಿ ಗೆಹ್ಲೋಟ್‌, ಸ್ವಚ್ಛತಾ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.

ಕೆರೆಯ ಅಂಗಳದ ಪಾದಚಾರಿ ಮಾರ್ಗದಲ್ಲಿ ಸ್ವಚ್ಛತೆ, ಕೆರೆ ಏರಿಯಲ್ಲಿ ಕಳೆ ತೆಗೆಯುವುದು, ನೀರಿನಲ್ಲಿ ಜೊಂಡು ತೆಗೆಯುವುದು, ಒಳಹರಿವು ಸ್ವಚ್ಛತೆಗೊಳಿಸುವ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಸ್ವಚ್ಛತಾ ಅಭಿಯಾನವು ಈ ವಾರ ಪೂರ್ತಿ ನಡೆಯಲಿದ್ದು, ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಸರಿಯಾಗಿ ಸ್ವಚ್ಛತೆ ಮಾಡಲು ಅಧಿಕಾರಿಗಳಿಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.