ADVERTISEMENT

ಲಾಲ್‌ಬಾಗ್‌: ಆನೆಗಳ ಪ್ರತಿಕೃತಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 16:15 IST
Last Updated 2 ಫೆಬ್ರುವರಿ 2024, 16:15 IST
ಆನೆ ಬಂತು ಆನೆ, ಕಟ್ಟಿಗೆ ಆನೆ...
ಕಳೆ ಗಿಡಗಳ ಕಾಂಡದಿಂದ ತಯಾರಿಸಲಾದ ಆನೆಗಳ ಪ್ರತಿರೂಪಗಳನ್ನು ಲಾಲ್‌ಬಾಗ್‌ನಲ್ಲಿ ಪ್ರದರ್ಶನಕ್ಕಿಡಲು ಲಾರಿಯಲ್ಲಿ ಕೊಂಡೊಯ್ಯಲಾಯಿತು. – ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌
ಆನೆ ಬಂತು ಆನೆ, ಕಟ್ಟಿಗೆ ಆನೆ... ಕಳೆ ಗಿಡಗಳ ಕಾಂಡದಿಂದ ತಯಾರಿಸಲಾದ ಆನೆಗಳ ಪ್ರತಿರೂಪಗಳನ್ನು ಲಾಲ್‌ಬಾಗ್‌ನಲ್ಲಿ ಪ್ರದರ್ಶನಕ್ಕಿಡಲು ಲಾರಿಯಲ್ಲಿ ಕೊಂಡೊಯ್ಯಲಾಯಿತು. – ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌   

ಬೆಂಗಳೂರು: ಕಳೆ ಗಿಡಗಳ ಕಾಂಡದಿಂದ ತಯಾರಿಸಲಾದ ಆನೆಗಳ ಕಲಾಕೃತಿಗಳ ಪ್ರದರ್ಶನವನ್ನು ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿದ್ದು, ಪ್ರದರ್ಶನಕ್ಕೆ ಫೆ.3ರಂದು ಚಾಲನೆ ದೊರೆಯಲಿದೆ. ‌

ಫೆ.3ರಿಂದ ಮಾರ್ಚ್ 3ರವರೆಗೆ ದೊಡ್ಡ ಆನೆ ಹಾಗೂ ಮರಿಯಾನೆಯ 60 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಗಾಜಿನಮನೆ ಸಮೀಪದ ಹುಲ್ಲುಹಾಸು ಪ್ರದೇಶ, ಗಾಜಿನ ಮನೆ ಹಿಂಭಾಗದ ಪ್ರದೇಶಗಳಲ್ಲಿ ಪ್ರದರ್ಶನಗೊಳ್ಳಲಿವೆ. ಸೋಲಿಗ, ಜೇನು ಕುರುಬ, ಬೆಟ್ಟ ಕುರುಬ ಸೇರಿದಂತೆ ಇತರೆ ಬುಡಕಟ್ಟು ಸಮುದಾಯದ ಕಲಾವಿದರು ಕಳೆ ಗಿಡಗಳ ಕಾಂಡ ಬಳಸಿಕೊಂಡು ಆನೆಗಳ ಕಲಾಕೃತಿಗಳನ್ನು ಸಿದ್ಧಪಡಿಸಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT