ಬೆಂಗಳೂರು: ಪೂರ್ಣ ಪ್ರಮಾಣದಲ್ಲಿ ಅಂತಿಮ ಕಾರ್ಯಾಚರಣೆ ಅನುಮತಿ (ಎಫ್‌ಒಸಿ) ಪಡೆದಿರುವ ‘ಎಲ್‌ಸಿಎ–ತೇಜಸ್’ ಯುದ್ಧ ವಿಮಾನವು ಏರೋ ಇಂಡಿಯಾದ ಭಾರತೀಯ ಪೆವಿಲಿಯನ್‌ನಲ್ಲಿ ಪ್ರದರ್ಶಿತವಾಗಲಿದೆ.
ಫೆ.13ರಿಂದ 17ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾದ 14ನೇ ಆವೃತ್ತಿಯಲ್ಲಿ ‘ಏರ್–ಶೋ’ ಮತ್ತು ವೈಮಾನಿಕ ಕ್ಷೇತ್ರದ ಸಾಧನೆಗಳನ್ನು ಬಿಂಬಿಸಲಾಗುತ್ತಿದೆ. ಭಾರತದ ವೈಮಾನಿಕ ಕ್ಷೇತ್ರದ ಸಾಧನೆಗಳನ್ನು ಬಿಂಬಿಸಲು ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ.
ಖಾಸಗಿ ಸಹಭಾಗಿತ್ವದಲ್ಲಿ ಉತ್ಪಾದಿಸುತ್ತಿರುವ ‘ಎಲ್‌ಸಿಎ-ತೇಜಸ್’ ಯುದ್ಧ ವಿಮಾನದ ವಿವಿಧ ರಚನಾತ್ಮಕ ಮಾದರಿಗಳು, ಸಿಮ್ಯುಲೇಟರ್‌ಗಳನ್ನು (ಎಲ್‌ಆರ್‌ಯು) ಪ್ರದರ್ಶಿಸಲಾಗುತ್ತಿದೆ.
ಎಲ್‌ಸಿಎ ತೇಜಸ್ ಒಂದೇ ಎಂಜಿನ್ ಹೊಂದಿದ್ದು, ಹಗುರ ಮತ್ತು ಚಾಕಚಕ್ಯತೆಯ ಬಹು-ಪಾತ್ರದ ಸೂಪರ್ ಸಾನಿಕ್ ಯುದ್ಧ ವಿಮಾನವಾಗಿದೆ. ಇದು ಸುಧಾರಿತ ವಿಮಾನ ನಿಯಂತ್ರಣಗಳನ್ನು ಹೊಂದಿದೆ. ಗ್ಲಾಸ್ ಕಾಕ್‌ಪಿಟ್, ಹಾರಾಟದ ವೇಳೆಯೇ ಇಂಧನ ತುಂಬುವುದು ಸೇರಿದಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ತೇಜಸ್ ಹೊಂದಿದೆ. ಪ್ರಸ್ತುತ ವಾಯುಪಡೆ ಯುದ್ಧ ವಿಮಾನ, ಎಲ್‌ಸಿಎ ನೌಕಾ ವಿಮಾನ ಮತ್ತು ಎರಡು ಆಸನಗಳಲ್ಲಿ ಲಭ್ಯವಿದೆ ಎಂದು ರಕ್ಷಣಾ ಇಲಾಖೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.