ADVERTISEMENT

ಭಾಷೆ ಕಲಿತು, ಬಾಂಧವ್ಯ ಬೆಸೆಯಿರಿ: ಕೇರಳ ವಿದ್ಯಾರ್ಥಿಗಳಿಗೆ ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 14:45 IST
Last Updated 6 ಅಕ್ಟೋಬರ್ 2024, 14:45 IST
ಚಿಕ್ಕಬಾಣಾವರದ ಎಂ.ಎ.ಜೆ ಫೌಂಡೇಷನ್‌ನ ಧನ್ವಂತರಿ ಶಿಕ್ಷಣ ಸಂಸ್ಥೆಯಿಂದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಅಯೋಜಿಸಿದ್ದ ‘ಆರ್ಮಧಮ್ 2024 ಓಣಂ‘ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಎಸ್. ಮುನಿರಾಜು (ಎಡದಿಂದ ಮೂರು ಮತ್ತು ನಾಲ್ಕನೆಯವರು) ಭಾಗವಹಿಸಿದ್ದರು
ಚಿಕ್ಕಬಾಣಾವರದ ಎಂ.ಎ.ಜೆ ಫೌಂಡೇಷನ್‌ನ ಧನ್ವಂತರಿ ಶಿಕ್ಷಣ ಸಂಸ್ಥೆಯಿಂದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಅಯೋಜಿಸಿದ್ದ ‘ಆರ್ಮಧಮ್ 2024 ಓಣಂ‘ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಎಸ್. ಮುನಿರಾಜು (ಎಡದಿಂದ ಮೂರು ಮತ್ತು ನಾಲ್ಕನೆಯವರು) ಭಾಗವಹಿಸಿದ್ದರು   

ಪೀಣ್ಯ ದಾಸರಹಳ್ಳಿ: ‘ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕೇರಳದ ವಿದ್ಯಾರ್ಥಿಗಳು ಕನ್ನಡ ಭಾಷೆ ಕಲಿತು, ರಾಜ್ಯಗಳ ನಡುವೆ ಬಾಂಧವ್ಯ ಬೆಸೆಯಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು

ಚಿಕ್ಕಬಾಣಾವರದ ಎಂ.ಎ.ಜೆ ಫೌಂಡೇಷನ್‌ನ ಧನ್ವಂತರಿ ಶಿಕ್ಷಣ ಸಂಸ್ಥೆಯಿಂದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಆರ್ಮಧಮ್ 2024 ಓಣಂ’ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ರಾಜ್ಯದಲ್ಲೂ ಒಂದೊಂದು ವಿಶಿಷ್ಟ ಸಂಪ್ರದಾಯವಿದ್ದು ಅದರಂತೆ ಕೇರಳದ ಓಣಂ ಹಬ್ಬ ದೇಶದಲ್ಲೇ ಗಮನ ಸೆಳೆದಿದೆ. ಕೇರಳದಿಂದ ಓದುವುದಕ್ಕಾಗಿ ಬಂದಿರುವ ವಿದ್ಯಾರ್ಥಿಗಳಿಗಾಗಿ ಧನ್ವಂತರಿ ಶಿಕ್ಷಣ ಸಂಸ್ಥೆ ಓಣಂ ಆಚರಣೆ ಹಮ್ಮಿಕೊಂಡಿದೆ. ಇದು ಬಾಂಧವ್ಯ ಬೆಸೆಯುವ ಹೆಜ್ಜೆಯಾಗಿದೆ' ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

ಶಾಸಕ ಎಸ್. ಮುನಿರಾಜು ಮಾತಾನಾಡಿ ‘ಓಣಂ ಹಬ್ಬವು ದೇಶದ ಸಂಸ್ಕೃತಿಯನ್ನು ಬೆಸೆಯುವುದರೊಂದಿಗೆ ಮನಸ್ಸುಗಳನ್ನು ಒಂದುಗೂಡಿಸುವ ಹಬ್ಬ. ಈ ಸಾಂಸ್ಕೃತಿಕ ಹಬ್ಬ ಎಲ್ಲರಿಗೂ ಸಮೃದ್ಧಿ ಹಾಗೂ ಒಳಿತನ್ನು ತರಲಿ' ಎಂದರು.

ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇರಳದ ಸಾಂಪ್ರದಾಯಿಕ ನೃತ್ಯ, ಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.