ADVERTISEMENT

ಜೀವಜಾಲ- ಯಂತ್ರಜಾಲಗಳ ಸಮನ್ವಯ ಬೇಕು: ವಿಜ್ಞಾನ ಬರಹಗಾರ ಗುರುರಾಜ.ಎಸ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 16:06 IST
Last Updated 17 ನವೆಂಬರ್ 2024, 16:06 IST
<div class="paragraphs"><p>ಹೆಸರಘಟ್ಟ ಮುಖ್ಯ ರಸ್ತೆಯ ಹಾವನೂರು ಬಡಾವಣೆಯ ಭೂಮಿಕಾ ಸೇವಾ ಫೌಂಡೇಶನ್ ಸಭಾಂಗಣದಲ್ಲಿ ‘ಜೀವಜಾಲ ವರ್ಸಸ್ ಯಂತ್ರ ಜಾಲ: ಯಾವುದು ನಮ್ಮ ಆಯ್ಕೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಜ್ಞಾನ ಬರಹಗಾರ ಗುರುರಾಜ ಎಸ್. ದಾವಣಗೆರೆ ಮಾತನಾಡಿದರು.</p></div>

ಹೆಸರಘಟ್ಟ ಮುಖ್ಯ ರಸ್ತೆಯ ಹಾವನೂರು ಬಡಾವಣೆಯ ಭೂಮಿಕಾ ಸೇವಾ ಫೌಂಡೇಶನ್ ಸಭಾಂಗಣದಲ್ಲಿ ‘ಜೀವಜಾಲ ವರ್ಸಸ್ ಯಂತ್ರ ಜಾಲ: ಯಾವುದು ನಮ್ಮ ಆಯ್ಕೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಜ್ಞಾನ ಬರಹಗಾರ ಗುರುರಾಜ ಎಸ್. ದಾವಣಗೆರೆ ಮಾತನಾಡಿದರು.

   

ಪೀಣ್ಯ ದಾಸರಹಳ್ಳಿ: ‘ಆಧುನಿಕ ಜೀವನ ಶೈಲಿಯ ಹೆಸರಿನಲ್ಲಿ ಯಂತ್ರಜಾಲದಲ್ಲಿ ಸಿಲುಕಿಕೊಂಡಿರುವ ಮನುಷ್ಯ, ರೋಮಾಂಚನಗೊಳಿಸುವ ಜೀವಜಾಲದ ವಿಸ್ಮಯಗಳ ಅನುಭವಿಸುವ ಅವಕಾಶಗಳಿಂದ ತಪ್ಪಿಸಿಕೊಳ್ಳುತ್ತಿದ್ದಾನೆ' ಎಂದು ವಿಜ್ಞಾನ ಬರಹಗಾರ ಗುರುರಾಜ ಎಸ್. ದಾವಣಗೆರೆ ತಿಳಿಸಿದರು.

ಹೆಸರಘಟ್ಟ ಮುಖ್ಯ ರಸ್ತೆಯ ಹಾವನೂರು ಬಡಾವಣೆಯ ಭೂಮಿಕಾ ಸೇವಾ ಫೌಂಡೇಷನ್ ಸಭಾಂಗಣದಲ್ಲಿ 'ಜೀವಜಾಲ ವರ್ಸಸ್ ಯಂತ್ರ ಜಾಲ: ಯಾವುದು ನಮ್ಮ ಆಯ್ಕೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ಜೀವಜಾಲದ ಪ್ರಮುಖ ಸದಸ್ಯನಾಗಿರುವ ಮನುಷ್ಯ ತನ್ನ ಸುತ್ತಲಿನ ಗಿಡ, ಮರ, ಕಾಲಡಿಯಲ್ಲಿರುವ ಮಣ್ಣು ,ಹರಿಯುವ ನೀರು, ಹಾರುವ ಹಕ್ಕಿ, ಬೀಸುವ ಗಾಳಿ, ಬೀಳುವ ಮಳೆ, ಸುತ್ತಲಿನ ಪ್ರಾಣಿಗಳನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು ಏನೆಲ್ಲಾ ಪಾರಿಸರಿಕ ದುರಂತಗಳನ್ನು ಸೃಷ್ಟಿಸಿದ್ದಾನೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ತೋರಿದ ಸಹಿಷ್ಣುತೆ ಮತ್ತು ಸರಳತೆಯ ಮಾರ್ಗದಲ್ಲಿ ನಡೆದರೆ ಮಾತ್ರ ಭೂಮಿಗೆ, ಜೀವಜಾಲಕ್ಕೆ ,ಬದುಕಿಗೆ ಭವಿಷ್ಯವಿದೆ’ ಎಂದು ಅಭಿಪ್ರಾಯಪಟ್ಟರು.

'ಯಾಂತ್ರಿಕ ಬುದ್ಧಿಮತ್ತೆ ಆಧಾರಿತ ಯಂತ್ರಗಳು ತಾವೇ ಕಲಿತು ಮನುಷ್ಯನನ್ನು ನಿಯಂತ್ರಿಸುವ ದಿನಗಳು ದೂರವಿಲ್ಲ. ಈಗಾಗಲೇ ಯಂತ್ರಗಳ ದಾಸ್ಯಕ್ಕೆ ಸಿಲುಕಿರುವ ನಾವೆಲ್ಲ ಯಂತ್ರಗಳ ನಿಯಂತ್ರಣಕ್ಕೆ ಒಳಗಾಗದೆ ಜೀವಜಾಲ ಮತ್ತು ಯಂತ್ರ ಜಾಲಗಳ ಸಮನ್ವಯದ ಕಡೆ ತುರ್ತಾಗಿ ಗಮನಹರಿಸಬೇಕಿದೆ' ಎಂದು ಪ್ರತಿಪಾದಿಸಿದರು.

ದಾಸರಹಳ್ಳಿ ಕ್ಷೇತ್ರ ಘಟಕದ ಜಾನಪದ ಪರಿಷತ್ ಅಧ್ಯಕ್ಷ ವೈ.ಬಿ.ಎಚ್ ಜಯದೇವ್, ಪತ್ರಕರ್ತ ರಘುನಾಥ್ ಚ.ಹ, ಕಥೆಗಾರ ಕಂನಾಡಿಗಾ ನಾರಾಯಣ, ಫೌಂಡೇಷನ್ ಅಧ್ಯಕ್ಷೆ ಲತಾ ಕುಂದರಗಿ, ಗೌರವಾಧ್ಯಕ್ಷ ಗುರುನಾಥ್, ಕನ್ನಡ ಸೇನೆ ಖಜಾಂಚಿ ರಾಜೇಂದ್ರ ಕೊಣ್ಣೂರ ಮುಂತಾದವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.