ADVERTISEMENT

ಶಾಂತಿ ನಾಯಕ ಸೇರಿ ಎಂಟು ಮಂದಿಗೆ ‘ಲೇಖಿಕಾ ಪುಸ್ತಕ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 16:13 IST
Last Updated 6 ಜನವರಿ 2024, 16:13 IST

ಬೆಂಗಳೂರು: ಲೇಖಿಕಾ ಸಾಹಿತ್ಯ ವೇದಿಕೆ ನೀಡುವ 2023ನೇ ಸಾಲಿನ ‘ಲೇಖಿಕಾ ಪುಸ್ತಕ ಪ್ರಶಸ್ತಿ’ಗೆ ಲೇಖಕಿ ಶಾಂತಿ ನಾಯಕ ಸೇರಿ ಎಂಟು ಮಂದಿ ಆಯ್ಕೆಯಾಗಿದ್ದಾರೆ.

‘ಸಾವಿತ್ರಮ್ಮ ಅಪ್ಪಯ್ಯ ಹಿರಿಯ ಸಾಧಕಿ ಪ್ರಶಸ್ತಿ’ಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶಾಂತಿ ನಾಯಕ ಅವರನ್ನು ಆಯ್ಕೆ ಮಾಡಲಾಗಿದೆ. ‘ನಿಡಸಾಲೆ ಪುಟ್ಟಸ್ವಾಮಯ್ಯ ನಾಟಕ ಪ್ರಶಸ್ತಿ’ಗೆ ಧಾರವಾಡದ ಶೈಲಾ ಛಬ್ಬಿ ಅವರ ‘ಇಪ್ಪತ್ತೈದು ಪ್ರಹಸನಗಳು’ ಮತ್ತು ಮೈಸೂರಿನ ಗಣೇಶ ಅಮೀನಗಡ ಅವರ ‘ಬಿಚ್ಚಿದ ಜೋಳಿಗೆ’ ಕೃತಿ, ‘ಅಪೂರ್ವ ಕಾದಂಬರಿ ಪ್ರಶಸ್ತಿ’ಗೆ ಮೈಸೂರಿನ ಗೀತಾ ಸೀತಾರಾಂ ಅವರ ‘ರಾಜ ಕಲಾವಿದ ರವಿವರ್ಮ’ ಪುಸ್ತಕ, ‘ಮಂಗಳಾ ರಾಮಚಂದ್ರ ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ ಸಂತೆಬೆನ್ನೂರಿನ ಫೈಜ್ನಟ್ರಾಜ್ ಅವರ ‘ಮಗಳಿಗೆ ಹೇಳಿದ ಕಥೆಗಳು’ ಕೃತಿ ಆಯ್ಕೆಯಾಗಿದೆ.

‘ಕಮಲ ಸುರೇಶ ರಾವ್ ಮನೋಳಿ ಕಥಾ ಪ್ರಶಸ್ತಿ’ಗೆ ಧಾರವಾಡದ ವಿನುತಾ ಹಂಚಿನಮನಿ ಅವರ ‘ಅನುಸಂಧಾನ’ ಕೃತಿ ಹಾಗೂ ‘ಲೇಖಿಕಾ ವಿಶೇಷ ಪ್ರಶಸ್ತಿ’ಗೆ ಬೆಂಗಳೂರಿನ ಬೇಲೂರು ರಘುನಂದನ್ ಅವರ ‘ಚಿಟ್ಟೆ’ ಮತ್ತು ಕೆ.ವಿ. ರಾಜಲಕ್ಷ್ಮಿ ಅವರ ‘ಲಾಸ್ಟ್‌ ಬೆಂಚ್ ಹುಡುಗಿ ಮತ್ತು ಇತರ ಕಥೆಗಳು’ ಕೃತಿ ಆಯ್ಕೆಯಾಗಿದೆ. 

ADVERTISEMENT

ಶೈಲಜಾ ಸುರೇಶ್, ಸರಸ್ವತಿ ನಟರಾಜ್, ವಿದ್ಯಾ ಶಿರಹಟ್ಟಿ ತೀರ್ಪುಗಾರರಾಗಿದ್ದರು. ಲೇಖಿಕಾ ಸಾಹಿತ್ಯ ವೇದಿಕೆ ಮಾರ್ಚ್ ತಿಂಗಳಲ್ಲಿ ಆಯೋಜಿಸುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.