ADVERTISEMENT

6 ತಿಂಗಳ ಮಗುವಿನ ಲೆನ್ಸ್ ಸೆಕ್ಟೊಮಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 6:51 IST
Last Updated 29 ಡಿಸೆಂಬರ್ 2022, 6:51 IST
ಹೆಸರಘಟ್ಟ ಮುಖ್ಯರಸ್ತೆಯ ಭುವನೇಶ್ವರಿ ನಗರದ ಮಂಜುನಾಥ ನೇತ್ರಾಲಯದಿಂದ ಆರು ತಿಂಗಳ ಮಗುವಿನ ಅಪರೂಪದ ಲೆನ್ಸ್ ಸೆಕ್ಟೊಮಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ ವೈದ್ಯರ ತಂಡ.
ಹೆಸರಘಟ್ಟ ಮುಖ್ಯರಸ್ತೆಯ ಭುವನೇಶ್ವರಿ ನಗರದ ಮಂಜುನಾಥ ನೇತ್ರಾಲಯದಿಂದ ಆರು ತಿಂಗಳ ಮಗುವಿನ ಅಪರೂಪದ ಲೆನ್ಸ್ ಸೆಕ್ಟೊಮಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ ವೈದ್ಯರ ತಂಡ.   

ಪೀಣ್ಯ ದಾಸರಹಳ್ಳಿ: ಹೆಸರಘಟ್ಟ ಮುಖ್ಯರಸ್ತೆಯ ಭುವನೇಶ್ವರಿ ನಗರದ ಮಂಜುನಾಥ ನೇತ್ರಾಲಯದಲ್ಲಿನ ವೈದ್ಯರು ಆರು ತಿಂಗಳ ಮಗುವಿನ ಎರಡು ಕಣ್ಣುಗಳ ಲೆನ್ಸ್ ಸೆಕ್ಟೊಮಿ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ.

'ನಮ್ಮ ಆರು ತಿಂಗಳ ಮಗುವಿನ ಕಣ್ಣುಗಳು ಕಾಣುತ್ತಿರಲಿಲ್ಲ. ಅನೇಕ ಆಸ್ಪತ್ರೆಗಳನ್ನು ಸುತ್ತಿದ್ದೆವಾದರೂ ವೈದ್ಯರು ಚಿಕಿತ್ಸೆ ಮಾಡಲು ಹಿಂಜರಿದಿದ್ದರು. ಆಗ ಮೋದಿ ಕಣ್ಣಿನ ಆಸ್ಪತ್ರೆ ವೈದ್ಯರು ಮಂಜುನಾಥ ನೇತ್ರಾಲಯಕ್ಕೆ ಹೋಗುವಂತೆ ಸೂಚಿಸಿದರು.ಡಾ. ಮಂಜುನಾಥ್ ಅವರನ್ನು ಭೇಟಿ ಮಾಡಿದವು. ಅವರು ಮಗುವಿನ ಲೆನ್ಸ್ ಸೆಕ್ಟೊಮಿ ಶಸ್ತ್ರಚಿಕಿತ್ಸೆ ಮಾಡಿ, ಮತ್ತೆ ಕಣ್ಣು ಕಾಣುವ ಹಾಗೆ ಮಾಡಿದ್ದಾರೆ' ಎಂದು ಮಗುವಿನ ತಾಯಿ ಹೇಮಾವತಿ ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಡಾ. ಮಂಜುನಾಥ್, ಡಾ. ಮಹೇಶ್, ಡಾ. ತುಂಗಪ್ಪ ಮುಂತಾದವರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.