ADVERTISEMENT

ಕೈಉತ್ಪನ್ನಗಳಿಗೆ ಬೆಂಬಲ ಕೋರಿ ಮುಖ್ಯಮಂತ್ರಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 19:37 IST
Last Updated 3 ಜುಲೈ 2018, 19:37 IST

ಬೆಂಗಳೂರು: ಕೈ ಉತ್ಪನ್ನಗಳ ಮೇಲಿನ ರಾಜ್ಯದ ಜಿಎಸ್‌ಟಿ ಪ್ರಮಾಣವನ್ನು ಕೈಬಿಡುವಂತೆ ಕೋರಿ ಗ್ರಾಮಸೇವಾ ಸಂಘ ಪತ್ರ ಬರೆದಿದೆ.

‘ರಾಜ್ಯ ಕೂಡ ಕೈ ಉತ್ಪನ್ನಗಳ ಮೇಲೆ ಅತ್ಯಲ್ಪ ಪ್ರಮಾಣದ ಜಿಎಸ್‌ಟಿ ದರವನ್ನು ಪಡೆಯುತ್ತಿದೆ. ಇದನ್ನು ಕೈಬಿಡಬೇಕು. ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬೆಂಬಲ ನೀಡಬೇಕು’ ಎಂದು ಪತ್ರದಲ್ಲಿ ಕೋರಲಾಗಿದೆ.

‘ಇದರಿಂದ ಗ್ರಾಮೀಣ ಭಾಗದ ಬಡವರಿಗೆ ಸಹಾಯವಾಗಲಿದೆ. ಕೈ ಉತ್ಪನ್ನಗಳ ಬೆಲೆ ಹೆಚ್ಚಿ, ರೈತರು ಬದುಕುವಂತೆ ಆಗಲಿದೆ. ಗ್ರಾಮೀಣ ಉತ್ಪಾದಕರು ತಮ್ಮದೇ ಮಾರಾಟ ಸಹಕಾರ ಸಂಘಗಳನ್ನು ರಚಿಸಿಕೊಂಡು ನಗರಗಳ ಚಿಲ್ಲರೆ ಮಾರಾಟ ಕ್ಷೇತ್ರ ಪ್ರವೇಶಿಸದೆ ಬದುಕುವುದು ಸಾಧ್ಯವಾಗಲಿದೆ’ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.