ADVERTISEMENT

ಬೆಂಗಳೂರು: ಪುಸ್ತಕಗಳ ಬೆಲೆ ಪರಿಷ್ಕರಣೆ ಬಗ್ಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 16:26 IST
Last Updated 29 ಅಕ್ಟೋಬರ್ 2024, 16:26 IST
ಮಧು ಬಂಗಾರಪ್ಪ ಅವರ ಜತೆಗೆ ಎಚ್.ವಿಶ್ವನಾಥ್, ಪ್ರಕಾಶಕರಾದ ದಾಮಿನಿ ಸತೀಶ್ ಹಾಗೂ ಸೃಷ್ಟಿ ನಾಗೇಶ್ ಚರ್ಚಿಸಿದರು.
ಮಧು ಬಂಗಾರಪ್ಪ ಅವರ ಜತೆಗೆ ಎಚ್.ವಿಶ್ವನಾಥ್, ಪ್ರಕಾಶಕರಾದ ದಾಮಿನಿ ಸತೀಶ್ ಹಾಗೂ ಸೃಷ್ಟಿ ನಾಗೇಶ್ ಚರ್ಚಿಸಿದರು.   

ಬೆಂಗಳೂರು: ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ನೇತೃತ್ವದಲ್ಲಿ ಪ್ರಕಾಶಕರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ನಗರದಲ್ಲಿ ಮಂಗಳವಾರ ಭೇಟಿ ಮಾಡಿ, ಪುಸ್ತಕಗಳ ಪುಟಗಳ ಬೆಲೆ ಪರಿಷ್ಕರಣೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಚರ್ಚಿಸಿದರು.  

‘ಪುಸ್ತಕ ಪ್ರಕಟಣೆ ವೆಚ್ಚ ಗಗನಕ್ಕೇರಿದೆ. ಆದರೆ, ಸಗಟು ಖರೀದಿಯಲ್ಲಿ ಮಾತ್ರ ಹಳೆಯ ದರವನ್ನೇ ನಿಗದಿಪಡಿಸಲಾಗಿದೆ. ಹೆಚ್ಚಿರುವ ಕಾಗದ, ಮುದ್ರಣ ಬೆಲೆ, ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಪ್ರಕಾಶನ ರಂಗ ತತ್ತರಿಸಿದೆ. ಆದ್ದರಿಂದ ಪುಸ್ತಕದ ಪುಟಗಳ ಬೆಲೆಯನ್ನು ಪರಿಷ್ಕರಿಸಬೇಕು. ಈ ಹಿಂದೆ 2017ರಲ್ಲಿ ಕನ್ನಡ ಪುಸ್ತಕಗಳ ಪರಿಷ್ಕರಣೆ ಮಾಡಿದ್ದು, ಏಳು ವರ್ಷಗಳಿಂದ ಬೆಲೆ ಪರಿಷ್ಕರಿಸಿಲ್ಲ. ಏಕಗವಾಕ್ಷಿ ಯೋಜನೆಯಡಿ ಪುಸ್ತಕಗಳ ಖರೀದಿ ಪ್ರಕ್ರಿಯೆಯನ್ನು ಸಕಾಲಕ್ಕೆ ನಡೆಸಬೇಕು’ ಎಂದು ಪ್ರಕಾಶಕರು ಸಚಿವರಿಗೆ ಮನವಿ ಮಾಡಿಕೊಂಡರು. 

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಧು ಬಂಗಾರಪ್ಪ, ‘ಬೆಲೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದೇನೆ. ಕನ್ನಡ ಪುಸ್ತಕಗಳ ಖರೀದಿಗೆ ಯಾವುದೇ ಲೋಪ ಬಾರದಂತೆ ನೋಡಿಕೊಳ್ಳಲಾಗುವುದು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.