ADVERTISEMENT

ಲಿಂಗತ್ವ ಅಲ್ಪಸಂಖ್ಯಾತರಿಗೆ ತಾತ್ಕಾಲಿಕ ವಸತಿ ಸೌಕರ್ಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 15:28 IST
Last Updated 27 ಜೂನ್ 2024, 15:28 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಇಲ್ಲಿನ ರಾಹಿ: ಎ ಜರ್ನಿ ಟುವರ್ಡ್ಸ್ ಡಿಗ್ನಿಟಿ ಸಂಸ್ಥೆಯು ಲಿಂಗತ್ವ ಅಲ್ಪಸಂಖ್ಯಾತರಿಗೆ ತಾತ್ಕಾಲಿಕ ಆಶ್ರಯಕ್ಕೆ ಮನೆಯನ್ನು ನಿರ್ಮಿಸಿದ್ದು, ಇದೇ ಶನಿವಾರ ಬೆಳಿಗ್ಗೆ 11 ಗಂಟೆಗೆ ಹೊಯ್ಸಳ ನಗರದ ಸ್ಕೂಲ್‌ ಆಫ್ ಪರ್ಫಾರ್ಮಿಂಗ್ ಆರ್ಟ್ಸ್‌ನ ನಾಟ್ಯಪ್ರಿಯ ನೃತ್ಯ ಕ್ಷೇತ್ರದಲ್ಲಿ ಉದ್ಘಾಟನೆ ಸಮಾರಂಭ ಹಮ್ಮಿಕೊಂಡಿದೆ. 

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಸುಚಿತ್ರಾ ಕೆ.ಕೆ., ‘ಕ್ವೀರ್, ಟ್ರಾನ್ಸ್‌ಮಾಸ್ಕುಲಿನ್ ಮತ್ತು ಅಂತರ್‌ ಲಿಂಗಿ (ಇಂಟರ್‌ ಸೆಕ್ಸ್) ವ್ಯತ್ಯಾಸಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಈ ಮನೆ ಸಹಕಾರಿಯಾಗಲಿದೆ. ಬಿಕ್ಕಟ್ಟಿನ ತೀವ್ರತೆಗೆ ಅನುಗುಣವಾಗಿ ಈ ಆಶ್ರಯ ಮನೆಯಲ್ಲಿ ಗರಿಷ್ಠ 8 ರಿಂದ 10 ಮಂದಿಗೆ 60 ದಿನಗಳವರೆಗೆ ಅಲ್ಪಾವಧಿಯ ವಸತಿ ಸೌಕರ್ಯ ಒದಗಿಸಲಾಗುತ್ತದೆ. ಆಶ್ರಯ ಮನೆಯು ಸುರಕ್ಷಿತ ಮತ್ತು ಸುಭದ್ರ ವಾತಾವರಣ ಒದಗಿಸುವ ಗುರಿಯನ್ನು ಹೊಂದಿದೆ. ಸಮುದಾಯದವರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಹೇಳಿದರು.

ADVERTISEMENT

‘ಆಶ್ರಯ ಮನೆಯಲ್ಲಿ ಅಗತ್ಯ ಸಹಾಯ, ಕಾಳಜಿ, ಬೆಂಬಲ ಮತ್ತು ಸಂಪನ್ಮೂಲವನ್ನು ಪಡೆಯಬಹುದು. ಈ ಮನೆಯಲ್ಲಿ ಸೌಲಭ್ಯ ಒದಗಿಸಲು ತರಬೇತಿ ಹೊಂದಿದ ಸಿಬ್ಬಂದಿ ಇರುತ್ತಾರೆ. ಅವರು ಮಾನಸಿಕ ಆರೋಗ್ಯ ಸೇವೆ ಸೇರಿ ವಿವಿಧ ನೆರವನ್ನು ಒದಗಿಸುತ್ತಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.