ಬೆಂಗಳೂರು: ‘ಚಲನಚಿತ್ರ ಕ್ಷೇತ್ರ ದಲ್ಲಿಸಾಹಿತ್ಯ ಸೃಷ್ಟಿಗೆ ಈ ಮೊದಲಿದ್ದ ಮಡಿವಂತಿಕೆ ದೂರವಾಗಿದ್ದು,ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಪ್ರಮುಖರು ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ’ ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ತಿಳಿಸಿದರು.
ಹಂಸಜ್ಯೋತಿ ಟ್ರಸ್ಟ್ ನಗರದಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಲೇಖಕ ಅ.ನಾ. ಪ್ರಹ್ಲಾದರಾವ್ ಅವರ ‘ಹೆಜ್ಜೆ ಗುರುತು’ ಕೃತಿ ಬಿಡುಗಡೆ ಮಾಡಿ, ಮಾತನಾಡಿದರು.
‘ಒಂದು ಕಾಲದಲ್ಲಿ ಸಿನಿಮಾ ಕ್ಷೇತ್ರವನ್ನುಅಸ್ಪೃಶ್ಯರ ಕ್ಷೇತ್ರವೆಂದು ಭಾವಿಸಲಾಗಿತ್ತು. ಇದರಿಂದಾಗಿ ಆ ಕ್ಷೇತ್ರದಿಂದ ಲೇಖಕರು ಹಾಗೂ ಸಾಹಿ ತಿಗಳು ಅಂತರ ಕಾಯ್ದುಕೊಳ್ಳುತ್ತಿದ್ದರು. ಆದರೆ, ಈಗ ಸಿನಿಮಾ ಕ್ಷೇತ್ರದಲ್ಲಿ ಆ ಪರಿಸ್ಥಿತಿಯಿಲ್ಲ.ಸಾಹಿತ್ಯ ಕ್ಷೇತ್ರದ ದಿಗ್ಗಜರಾದ ದ.ರಾ. ಬೇಂದ್ರೆ, ಅ.ನ. ಕೃಷ್ಣರಾಯ, ಶಿವರಾಮ ಕಾರಂತ ಸೇರಿ ಹಲವರು ಚನಲಚಿತ್ರ ಗೀತೆಗಳಿಗೆ ಸಾಹಿತ್ಯ ಬರೆದಿದ್ದಾರೆ.ಸಂಗೀತ ಕ್ಷೇತ್ರದ ಸಾಧಕರಾದ ಪಂಡಿತ ಬಸವರಾಜ ರಾಜಗುರು, ಪಿಟೀಲು ಚೌಡಯ್ಯಸೇರಿ ಕೆಲವರು ಸಿನಿಮಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ’ ಎಂದರು.
‘ಸಿನಿಮಾ ಕ್ಷೇತ್ರವು ಕಲಾತ್ಮಕತೆ, ರೋಚಕತೆ ಕಳೆದುಕೊಂಡು, ಮನೋ ರಂಜನೆಗೆ ಒತ್ತು ನೀಡಿದ ಬಳಿಕ ಕೆಲವರು ಈ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದರು.ವ್ಯಾಸರಾವ್ ಅಂತಹವರ ಆಗಮನದಿಂದ ನಾನು ಕೂಡ ಸಿನಿಮಾ ಗೀತೆಗಳಿಗೆ ಸಾಹಿತ್ಯ ಮತ್ತು ಸಂಭಾಷಣೆ ಬರೆಯಲಾರಂಭಿಸಿದೆ’ ಎಂದು ಅವರು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ‘ತಂತ್ರ ಜ್ಞಾನ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಆದರೆ,ತಂತ್ರಜ್ಞಾನಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು.ಸಿನಿಮಾ ಕ್ಷೇತ್ರದಲ್ಲಿ ಶೈಕ್ಷಣಿಕ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಆಗ ಹೊಸ ಪ್ರಯೋಗಗಳು ಸಾಧ್ಯವಾಗಲಿವೆ’ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.