ADVERTISEMENT

ಠಾಣೆಗೊಂದು ಪುಟ್ಟ ಗ್ರಂಥಾಲಯ!

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:38 IST
Last Updated 1 ಜೂನ್ 2019, 20:38 IST
ಗ್ರಂಥಾಲಯ
ಗ್ರಂಥಾಲಯ   

ಬೆಂಗಳೂರು: ಪೊಲೀಸ್ ವೃತ್ತಿಯ ಜೊತೆಗೆ ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ದಕ್ಷಿಣ ವಿಭಾಗದಲ್ಲಿರುವ 17 ಠಾಣೆಗಳಲ್ಲಿ ಪುಟ್ಟ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ.

ಪ್ರತಿ ಗ್ರಂಥಾಲಯಗಳಲ್ಲಿ ತಲಾ 20 ಪುಸ್ತಕಗಳಿವೆ. ನಮ್ಮ ಈ ಯೋಚನೆ ಇಷ್ಟವಾದರೆ ನೀವೂ ಪುಸ್ತಕ ನೀಡಿ ಎಂದು ಡಿಸಿಪಿ ಅಣ್ಣಾಮಲೈ ಟ್ವೀಟ್‌ ಮಾಡಿದ್ದಾರೆ.

ಠಾಣೆಯಲ್ಲಿರುವ ಪೊಲೀಸರು ಬಿಡುವಿನ ಸಮಯದಲ್ಲಿ ಪುಸ್ತಕ ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಲು ಈ ಗ್ರಂಥಾಲಯ ಸಹಕಾರಿ ಆಗಲಿದೆ. ಭಿನ್ನ ಪುಸ್ತಕಗಳ ಓದಿನಿಂದ ಜ್ಞಾನ ಹೆಚ್ಚಿಸುವ ಜೊತೆಗೆ ತಮ್ಮ ಕೆಲಸ ಕಾರ್ಯಗಳಲ್ಲಿ ಚುರುಕುತನ ಬರಲಿ. ಅಧಿಕಾರಿಗಳು ಸದೃಢರಾಗಲಿ ಎಂಬ ಉದ್ದೇಶದಿಂದ ಗ್ರಂಥಾಲಯ ಸ್ಥಾಪಿಸಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.