ADVERTISEMENT

ಲಾರಿ ಮುಷ್ಕರ ಆರಂಭ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 22:55 IST
Last Updated 17 ಜನವರಿ 2024, 22:55 IST
ಹಾಸನ ಜಿಲ್ಲೆಯಲ್ಲಿ ಲಾರಿ ಮುಷ್ಕರ ಹಿನ್ನೆಲೆ ರಾಜಘಟ್ಟ ಬಳಿ ಸಾಲಾಗಿ ನಿಂತಿರುವ ಲಾರಿಗಳು.
ಹಾಸನ ಜಿಲ್ಲೆಯಲ್ಲಿ ಲಾರಿ ಮುಷ್ಕರ ಹಿನ್ನೆಲೆ ರಾಜಘಟ್ಟ ಬಳಿ ಸಾಲಾಗಿ ನಿಂತಿರುವ ಲಾರಿಗಳು.   

ಬೆಂಗಳೂರು: ‘ಅಪಘಾತ ನಡೆಸಿ ಪರಾರಿ (ಹಿಟ್‌ ಆ್ಯಂಡ್‌ ರನ್‌) ಆಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಚಾಲಕರಿಗೆ ಮಾರಕವಾಗುವ ರೀತಿಯಲ್ಲಿ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿ ಬುಧವಾರ ರಾತ್ರಿ 12 ರಿಂದಲೇ ಲಾರಿ ಮುಷ್ಕರ ಆರಂಭಗೊಂಡಿದೆ. 

ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಶನ್‌ ಮುಷ್ಕರ ಆರಂಭಿಸಿದ್ದರೆ, ಫೆಡರೇಷನ್‌ ಆಫ್ ಕರ್ನಾಟಕ ಸ್ಟೇಟ್‌ ಲಾರಿ ಓನರ್ಸ್ ಆ್ಯಂಡ್ ಏಜೆಂಟ್ಸ್ ಅಸೋಸಿಯೇಷನ್ ಮುಷ್ಕರದಿಂದ ಹೊರಗುಳಿದಿದೆ.

ಭಾರತೀಯ ನ್ಯಾಯಸಂಹಿತೆಯ ಕಲಂ 106ರ ಉಪವಿಧಿ 1 ಮತ್ತು 2 ತಿದ್ದುಪಡಿಯು ಸರಕು ಸಾಗಾಟದ ವಾಹನಗಳಿಗೆ ಚಾಲಕರು ಬರಲು ಹಿಂಜರಿಯುವಂತೆ ಮಾಡಿದೆ. ಯಾರೂ ಅಪಘಾತವನ್ನು ಬೇಕಂತಲೇ ಮಾಡುವುದಿಲ್ಲ. ಸಣ್ಣ ವಾಹನಗಳು ಬಂದು ಲಾರಿಗೆ ಡಿಕ್ಕಿ ಹೊಡೆದರೂ ಲಾರಿ ಚಾಲಕನ ಮೇಲೆಯೇ ಪ್ರಕರಣ ದಾಖಲಾಗುತ್ತದೆ. ಈ ತಿದ್ದುಪಡಿಯ ಪ್ರಕಾರ ಅಪಘಾತ ನಡೆದ ಕೂಡಲೇ ಬಂಧಿಸಬೇಕು. ಅಲ್ಲದೇ 10 ವರ್ಷ ಜೈಲು ಶಿಕ್ಷೆ, ₹ 7 ಲಕ್ಷ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಈ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವವರೆಗೆ ಮುಷ್ಕರ ಹಿಂಪಡೆಯುವುದಿಲ್ಲ ಎಂದು ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಸಿ. ನವೀನ್‌ ರೆಡ್ಡಿ ತಿಳಿಸಿದರು.

ADVERTISEMENT

‘ರಾಜ್ಯದ ಗಡಿ ಭಾಗಗಳಲ್ಲಿರುವ ಸಾರಿಗೆ ಇಲಾಖೆಯ ತಪಾಸಣೆ ಠಾಣೆಗಳನ್ನು ತೆಗೆದು ಹಾಕಬೇಕು. ಹೆಚ್ಚುವರಿ ಲೋಡ್‌ಗೆ ವಿಧಿಸುತ್ತಿರುವ ₹ 20,000 ದಂಡವನ್ನು ಕಡಿಮೆ ಮಾಡಬೇಕು. ಕಪ್ಪುಪಟ್ಟಿಯಲ್ಲಿರುವ ವಾಣಿಜ್ಯ ವಾಹನಗಳಿಗೆ ಸಾಮರ್ಥ್ಯ ಪ್ರಮಾಣಪತ್ರ (ಎಫ್‌ಸಿ), ಪರವಾನಗಿ ನವೀಕರಣ ನಿರಾಕರಿಸಬಾರದು. ಬೆಂಗಳೂರು ನಗರದ ಪ್ರವೇಶಕ್ಕೆ ಸರಕು ಸಾಗಾಟದ ವಾಹನಗಳಿಗೆ ದಿನದ ಕೆಲವು ಸಮಯದಲ್ಲಿ ನಿರ್ಬಂಧ ವಿಧಿಸಿರುವುದನ್ನು ತೆಗೆದು ಹಾಕಬೇಕು ಎಂಬುದನ್ನೂ ಸೇರಿ ಕೆಲವು ಸ್ಥಳೀಯ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಪೊಲೀಸ್‌ ಇಲಾಖೆ ಮತ್ತು ಸಾರಿಗೆ ಇಲಾಖೆಯ ಮುಂದೆ ಇಟ್ಟಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಎಲ್ಲ ಬೇಡಿಕೆಗಳು ಈಡೇರುವವರೆಗೆ ಮುಷ್ಕರ ಮುಂದುವರಿಯಲಿದೆ. ಹಾಲು, ಇಂಧನ, ಔಷಧ ಸಹಿತ ಅಗತ್ಯ ವಸ್ತುಗಳ ಸಾಗಾಟದ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ತಿದ್ದುಪಡಿಯ ಪ್ರಕಾರ, ಅಪಘಾತ ನಡೆದ ಕೂಡಲೇ ಚಾಲಕನನ್ನು ಬಂಧಿಸಬೇಕು. ಅಲ್ಲದೇ 10 ವರ್ಷ ಜೈಲು ಶಿಕ್ಷೆ, ₹ 7 ಲಕ್ಷ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಈ ತಿದ್ದುಪಡಿ ವಾಪಸ್ ಪಡೆಯುವವರೆಗೆ ಮುಷ್ಕರ ಹಿಂಪಡೆಯುವುದಿಲ್ಲ’ ಎಂದು ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಸಿ. ನವೀನ್‌ ರೆಡ್ಡಿ ತಿಳಿಸಿದರು.

‘ರಾಜ್ಯದ ಗಡಿ ಭಾಗಗಳಲ್ಲಿರುವ ಸಾರಿಗೆ ಇಲಾಖೆಯ ತಪಾಸಣೆ ಠಾಣೆಗಳನ್ನು ತೆಗೆದು ಹಾಕಬೇಕು. ಹೆಚ್ಚುವರಿ ಲೋಡ್‌ಗೆ ವಿಧಿಸುತ್ತಿರುವ ₹ 20,000 ದಂಡವನ್ನು ಕಡಿಮೆ ಮಾಡಬೇಕು. ಕಪ್ಪುಪಟ್ಟಿಯಲ್ಲಿರುವ ವಾಣಿಜ್ಯ ವಾಹನಗಳಿಗೆ ಸಾಮರ್ಥ್ಯ ಪ್ರಮಾಣಪತ್ರ (ಎಫ್‌ಸಿ), ಪರವಾನಗಿ ನವೀಕರಣ ನಿರಾಕರಿಸಬಾರದು. ಬೆಂಗಳೂರು ನಗರದ ಪ್ರವೇಶಕ್ಕೆ ಸರಕು ಸಾಗಾಟದ ವಾಹನಗಳಿಗೆ ದಿನದ ಕೆಲವು ಸಮಯದಲ್ಲಿ ನಿರ್ಬಂಧ ವಿಧಿಸಿರುವುದನ್ನು ತೆಗೆದು ಹಾಕಬೇಕು ಎಂಬುದನ್ನೂ ಸೇರಿ ಕೆಲವು ಸ್ಥಳೀಯ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಪೊಲೀಸ್‌ ಇಲಾಖೆ ಮತ್ತು ಸಾರಿಗೆ ಇಲಾಖೆಯ ಮುಂದೆ ಇಟ್ಟಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಎಲ್ಲ ಬೇಡಿಕೆಗಳು ಈಡೇರುವವರೆಗೆ ಮುಷ್ಕರ ಮುಂದುವರಿಯಲಿದೆ. ಹಾಲು, ಇಂಧನ, ಔಷಧ ಸಹಿತ ಅಗತ್ಯ ವಸ್ತುಗಳ ಸಾಗಾಟದ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಿಶ್ರ ಪ್ರತಿಕ್ರಿಯೆ: ಮುಷ್ಕರಕ್ಕೆ ಮೈಸೂರು ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಲಾರಿಗಳು, ಟೆಂಪೊಗಳು, ಬಾಡಿಗೆ ವಾಹನಗಳು ಸಂಚರಿಸಲಿಲ್ಲ. ಕೆಲವು ಆಟೊ ಚಾಲಕರು ಮತ್ತು ಮಾಲೀಕರು ಕೂಡ ಮುಷ್ಕರ ಬೆಂಬಲಿಸಿದರು. ಜಿಲ್ಲಾ ಕೇಂದ್ರ ಚಾಮರಾಜನಗರ ಮತ್ತು ಕೊಳ್ಳೇಗಾಲದಲ್ಲಿ ಬೃಹತ್‌ ಪ್ರತಿಭಟನೆ, ಮೆರವಣಿಗೆ ನಡೆಸಿದರು. 

ಮೈಸೂರಿನಲ್ಲಿ ಜಿಲ್ಲಾ ಲಾರಿ ಮಾಲೀಕರ ಒಕ್ಕೂಟವು ಸುದ್ದಿಗೋಷ್ಠಿ ನಡೆಸಿ ಬಂದ್‌ಗೆ ಬೆಂಬಲ ಸೂಚಿಸಿತು. ಹಾಸನ ಜಿಲ್ಲೆಯಲ್ಲಿ ಮುಷ್ಕರ ನಡೆಯಲಿಲ್ಲ. ‘ಲಾರಿ ಮುಷ್ಕರಕ್ಕೆ ಬೆಂಬಲವಿ‌ಲ್ಲ’ ಎಂದು ಕೊಡಗು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿಲ್ಲಾ ಅಧ್ಯಕ್ಷ ಮಸೂದ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.