ADVERTISEMENT

ಜೀವನದ ಪರಿಪೂರ್ಣತೆಗೆ ಪ್ರೀತಿ ಅಗತ್ಯ: ಅಮೃತಾನಂದಮಯಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 17:26 IST
Last Updated 16 ಜನವರಿ 2024, 17:26 IST
ನವದೆಹಲಿಯಲ್ಲಿ ಇತ್ತೀಚೆಗೆ ಅಮೃತ ವಿಶ್ವ ವಿದ್ಯಾಪೀಠಂನಿಂದ ಅಮೃತ ಸಂಶೋಧನೆ ಮತ್ತು ಅನ್ವೇಷಣೆ ಕುರಿತು ವಿಚಾರ ಸಂಕಿರಣ ನಡೆಯಿತು. ಮಾತಾ ಅಮೃತಾನಂದಮಯಿ ಹಾಜರಿದ್ದರು  
ನವದೆಹಲಿಯಲ್ಲಿ ಇತ್ತೀಚೆಗೆ ಅಮೃತ ವಿಶ್ವ ವಿದ್ಯಾಪೀಠಂನಿಂದ ಅಮೃತ ಸಂಶೋಧನೆ ಮತ್ತು ಅನ್ವೇಷಣೆ ಕುರಿತು ವಿಚಾರ ಸಂಕಿರಣ ನಡೆಯಿತು. ಮಾತಾ ಅಮೃತಾನಂದಮಯಿ ಹಾಜರಿದ್ದರು     

ಬೆಂಗಳೂರು: ‘ಜೀವನದ ಪರಿಪೂರ್ಣತೆಗಾಗಿ ನಮಗೆ ಪ್ರೀತಿ, ತಾದಾತ್ಮ್ಯ ಹಾಗೂ ಪ್ರಬುದ್ಧತೆ ಬೇಕಿದೆ. ಇತರರ ನೋವಿಗೆ ಸ್ಪಂದಿಸುವ ಗುಣವನ್ನೂ ಬೆಳೆಸಿಕೊಳ್ಳಬೇಕಿದೆ’ ಎಂದು ಅಮೃತ ವಿಶ್ವ ವಿದ್ಯಾಪೀಠಂನ ಉಪ ಕುಲಪತಿ ಅಮೃತಾನಂದಮಯಿ ಹೇಳಿದರು.

ನವದೆಹಲಿಯಲ್ಲಿ ಇತ್ತೀಚೆಗೆ ಅಮೃತ ವಿಶ್ವ ವಿದ್ಯಾಪೀಠಂನಿಂದ ಹಮ್ಮಿಕೊಂಡಿದ್ದ ಅಮೃತ ಸಂಶೋಧನೆ ಮತ್ತು ಅನ್ವೇಷಣೆ ಕುರಿತ ವಿಚಾರ ಸಂಕಿರಣದಲ್ಲಿ (ಅರೈಸ್‌) ಅವರು ಮಾತನಾಡಿದರು. 

‘ಜೀವನ ನಡೆಸಲು ಉದ್ಯೋಗ, ಹಣ, ಮನೆ ಬೇಕಿದೆ. ಆದರೆ, ಇವುಗಳಿಂದ ಬದುಕು ಪರಿಪೂರ್ಣವಾಗುವುದಿಲ್ಲ. ನಾವು ಹೊರ ಜಗತ್ತನ್ನು ನೋಡುವಂತೆ ನಮ್ಮೊಳಗಿನ ಕಣ್ಣುಗಳಿಂದ ಅಂತರಂಗವನ್ನು ನೋಡಬೇಕಿದೆ’ ಎಂದು ಸಲಹೆ ನೀಡಿದರು.

ADVERTISEMENT

ನಾಲ್ಕು ದಿನಗಳ ಕಾಲ ನಡೆದ ವಿಚಾರ ಸಂಕಿರಣದಲ್ಲಿ ಆರೋಗ್ಯ, ಪರಿಸರ, ಮೌಲ್ಯ ಶಿಕ್ಷಣ, ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. 

ಅಮೆರಿಕದ ಬಫಲೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೇಣು ಗೋವಿಂದರಾಜು, ಕೇಂದ್ರ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಸಂಶೋಧನಾ ಮಂಡಳಿಯ ಕಾರ್ಯದರ್ಶಿ ಡಾ.ಅಖಿಲೇಶ್‌ ಗುಪ್ತಾ, ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯ ಉಪಾಧ್ಯಕ್ಷ ಡಾ.ಶಂಕರ ವೇಣುಗೋಪಾಲ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ನಿರ್ದೇಶಕ ಡಾ.ರಂಜಿತ್‌ ಕೃಷ್ಣ, ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಜೀವ ವಿಜ್ಞಾನಗಳ ವಿಭಾಗದ ಪ್ರಧಾನ ನಿರ್ದೇಶಕ ಡಾ.ಉಪೇಂದ್ರಕುಮಾರ್‌ ಪಾಲ್ಗೊಂಡಿದ್ದರು. 

ಇದೇ ವೇಳೆ ಅಮೃತ ವಿಶ್ವ ವಿದ್ಯಾಪೀಠಂನ 24 ಸಂಶೋಧಕರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.