ADVERTISEMENT

ಕೆ.ಆರ್.ಪುರ: ಮಹದೇವಪುರದಲ್ಲಿ ವಿವಿಧ ಸೇವಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 16:26 IST
Last Updated 2 ಫೆಬ್ರುವರಿ 2024, 16:26 IST
ಹೂಡಿ ಸ್ಪೋರ್ಟ್ಸ್ ಕ್ಲಬ್‌ ವತಿಯಿಂದ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಅರವಿಂದ ಲಿಂಬಾವಳಿ ನಗದು ಬಹುಮಾನ ವಿತರಿಸಿದರು. ಮನೋಹರ ರೆಡ್ಡಿ, ನಟರಾಜ್, ರಾಜೇಶ್, ಹೂಡಿ ಪಿಳ್ಳಪ್ಪ ಪಾಲ್ಗೊಂಡಿದ್ದರು. 
ಹೂಡಿ ಸ್ಪೋರ್ಟ್ಸ್ ಕ್ಲಬ್‌ ವತಿಯಿಂದ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಅರವಿಂದ ಲಿಂಬಾವಳಿ ನಗದು ಬಹುಮಾನ ವಿತರಿಸಿದರು. ಮನೋಹರ ರೆಡ್ಡಿ, ನಟರಾಜ್, ರಾಜೇಶ್, ಹೂಡಿ ಪಿಳ್ಳಪ್ಪ ಪಾಲ್ಗೊಂಡಿದ್ದರು.    

ಕೆ.ಆರ್.ಪುರ: ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಜನ್ಮದಿನದ ಅಂಗವಾಗಿ ಮಹದೇವಪುರ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ವಿವಿಧ ಸೇವಾ ಕಾರ್ಯಗಳು ನಡೆದವು.

ರಕ್ತದಾನ, ನೇತ್ರ ತಪಾಸಣಾ ಶಿಬಿರ, ಸ್ವಚ್ಛ ಮಹದೇವಪುರ ಅಭಿಯಾನ, ಅನ್ನದಾನ, ವಸ್ತ್ರದಾನ, ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣೆ ಮಾಡಲಾಯಿತು.

ಪೌರ ಕಾರ್ಮಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಕೋವಿಡ್ ವಾರಿಯರ್ಸ್, ಸರ್ಕಾರಿ ಶಿಕ್ಷಕರು, ಹಿರಿಯ ನಾಗರಿಕರಿಗೆ ಸನ್ಮಾನ, ಅನಾಥಶ್ರಮ, ವೃದ್ದಾಶ್ರಮ ಮತ್ತು ಗೋಶಾಲೆಯಲ್ಲಿ ಸೇವಾ ಕಾರ್ಯಗಳನ್ನು ಕಾರ್ಯಕರ್ತರು ಹಮ್ಮಿಕೊಂಡಿದ್ದರು.

ADVERTISEMENT

ಹೂಡಿಯ ಹೂಡಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ವಲಯ ಹಿರಿಯ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯಶೀಲರಾದ ತಂಡಗಳಿಗೆ ಬಹುಮಾನ ವಿತರಿಸಿದರು.

ಅರವಿಂದ ಲಿಂಬಾವಳಿ ಮಾತನಾಡಿ, ಕ್ಷೇತ್ರದ 116 ಸ್ಥಳಗಳಲ್ಲಿ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಜನರ ಸೇವೆ ಮಾಡಲಾಗಿದೆ ಎಂದು ಹೇಳಿದರು.

ಮಹದೇವಪುರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಮನೋಹರರೆಡ್ಡಿ, ಗ್ರಾಮಾಂತರ ಅಧ್ಯಕ್ಷ ನಟರಾಜ್, ಹೂಡಿ ಪಿಳ್ಳಪ್ಪ, ಎಲ್.ರಾಜೇಶ್, ಗಿರಿರಾಜ್ ಗೌಡ, ಗಗನ್ ಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.