ಬೆಂಗಳೂರು: ಆನ್‌ಲೈನ್ ಡೇಟಿಂಗ್ ಆ್ಯಪ್‌ವೊಂದರಲ್ಲಿ ಪರಿಚಯವಾದ ಜೆ.ಪಿ.ನಗರದ 5ನೇ ಹಂತದ ನಿವಾಸಿಯಾಗಿರುವ ಮಹಿಳೆಯೊಬ್ಬರು, ವ್ಯಕ್ತಿಯೊಬ್ಬರನ್ನು ಮನೆಗೆ ಕರೆದು ಸುಲಿಗೆ ಮಾಡಿದ್ದು, ಈ ಬಗ್ಗೆ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ವೈಟ್‌ಫೀಲ್ಡ್ ನಿವಾಸಿ ದೂರು ನೀಡಿದ್ದಾರೆ. ಇವರು ಡೇಟಿಂಗ್ ಆ್ಯಪ್‌ನಲ್ಲಿ ಖಾತೆ ತೆರೆದಿದ್ದರು. ಅಲ್ಲಿಯೇ ಮಹಿಳೆ ಪರಿಚಯವಾಗಿತ್ತು. ಇಬ್ಬರೂ ಚಾಟಿಂಗ್ ಮಾಡಲಾರಂಭಿಸಿದ್ದರು. ‘ಪತಿ ದುಬೈನಲ್ಲಿದ್ದಾರೆ. ಸಂಗಾತಿ ಬೇಕಾಗಿದೆ. ಮನೆಗೆ ಬಾ’ ಎಂದು ಮಹಿಳೆ ಸಂದೇಶ ಕಳುಹಿಸಿದ್ದರು. ನಂಬಿದ್ದ ದೂರುದಾರ ಮನೆಗೆ ಹೋಗಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಮನೆಯಲ್ಲಿದ್ದಾಗ ಮಹಿಳೆ ಕಡೆಯ ಮೂವರು ಮನೆಗೆ ನುಗ್ಗಿದ್ದರು. ‘ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದೆಯಾ. ಈ ವಿಷಯ ಎಲ್ಲರಿಗೂ ತಿಳಿಸುತ್ತೇವೆ. ಬಿಟ್ಟು ಕಳುಹಿಸಲು ₹ 3 ಲಕ್ಷ ಕೊಡು’ ಎಂದು ಬೆದರಿಸಿದ್ದರು. ಗಾಬರಿಗೊಂಡಿದ್ದ ದೂರುದಾರ, ಫೋನ್‌ಪೇ ಮೂಲಕ ₹ 21,000 ವರ್ಗಾಯಿಸಿ ತಪ್ಪಿಸಿಕೊಂಡಿದ್ದರು. ಈಗ ಠಾಣೆಗೆ ದೂರು ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.