ಬೆಂಗಳೂರು: ‘ದಂಪತಿಯಲ್ಲಿ ಫಲವತ್ತತೆಯ (ಫರ್ಟಿಲಿಟಿ) ಕೊರತೆ ಸಮಸ್ಯೆ ಹೆಚ್ಚಾಗುತ್ತಿದೆ. ಶೇ 50ರಷ್ಟು ಪುರುಷರಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ’ ಎಂದು ಅಪೊಲೊ ಆಸ್ಪತ್ರೆಗಳ ಸಮೂಹದ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸಂಗೀತಾ ರೆಡ್ಡಿ ತಿಳಿಸಿದರು.
ಅಪೊಲೊ ಕ್ರೆಡಲ್ ಆಸ್ಪತ್ರೆ ಆಶ್ರಯದಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ಕ್ರೆಡಲ್ ಸಮ್ಮೇಳನ’ದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಇತ್ತೀಚಿನ ವರದಿ ಗಮನಿಸಿದರೆ ಭಾರತದಲ್ಲಿ ಸಾವಿರದಲ್ಲಿ 24 ನವಜಾತ ಶಿಶುಗಳು ಫಲವತ್ತತೆ ಸಮಸ್ಯೆಯಿಂದಾಗಿ ಮರಣ ಹೊಂದುತ್ತಿವೆ. ಇದನ್ನು ನಿಯಂತ್ರಿಸಲು ನಮ್ಮ ಆಸ್ಪತ್ರೆಯ ಸೇವೆಯನ್ನು ಸಣ್ಣ ನಗರಗಳು ಹಾಗೂ ಪಟ್ಟಣಗಳಿಗೆ ವಿಸ್ತರಿಸಲಾಗುವುದು’ ಎಂದರು.
ಗರ್ಭಿಣಿಯರಿಗಾಗಿಪ್ರಸವಪೂರ್ವ ಹಾಗೂ ಪ್ರಸವದ ನಂತರ ಧರಿಸಲುವಿಶೇಷವಾಗಿವಿನ್ಯಾಸಗೊಳಿಸಿದ‘ಅಪೊಲೊ ಆ್ಯಂಡ್ರೋಕೇರ್’ ಮತ್ತು ‘ಮಾತೃತ್ವ ಉಡುಗೆ’ಯನ್ನು ಇದೇ ವೇಳೆ ಅನಾವರಣಗೊಳಿಸಿದರು.
ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಅನುಭವ್ ಪ್ರಶಾಂತ್, ಅವರು ಈ ಸಮಸ್ಯೆಯ ಗಂಭೀರತೆ ಬಗ್ಗೆ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.