ADVERTISEMENT

ನೈಸರ್ಗಿಕ ವಿಕೋಪಗಳಿಗೆ ಮನುಷ್ಯನೇ ಹೊಣೆ: ಎಸ್‌.ಸೋಮನಾಥ್‌

ಇಸ್ರೊ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಎಸ್‌.ಸೋಮನಾಥ್‌

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 16:02 IST
Last Updated 11 ಆಗಸ್ಟ್ 2024, 16:02 IST
ಕಾರ್ಯಕ್ರಮದಲ್ಲಿ ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಡಾ.ಎಸ್‌.ಸೋಮನಾಥ್‌ ಅವರನ್ನು ಏಟ್ರಿಯಾ ವಿಶ್ವವಿದ್ಯಾಲಯದ ಕುಲಾಧಿಪತಿ ಸುಂದರ್‌ರಾಜು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಡಾ.ಎಸ್‌.ಸೋಮನಾಥ್‌ ಅವರನ್ನು ಏಟ್ರಿಯಾ ವಿಶ್ವವಿದ್ಯಾಲಯದ ಕುಲಾಧಿಪತಿ ಸುಂದರ್‌ರಾಜು ಅಭಿನಂದಿಸಿದರು.   

ಯಲಹಂಕ: ‘ನೈಸರ್ಗಿಕ ವಿಕೋಪಗಳಿಗೆ ಪ್ರಕೃತಿಯ ಮೇಲೆ ಮನುಷ್ಯ ನಡೆಸಿರುವ ದಬ್ಬಾಳಿಕೆಯೇ ಕಾರಣ’ ಎಂದು ಇಸ್ರೊ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಎಸ್‌. ಸೋಮನಾಥ್‌ ತಿಳಿಸಿದರು.

ಹೆಬ್ಬಾಳದ ಏಟ್ರಿಯಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಹವಾಮಾನ ಬದಲಾವಣೆ’ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಯಲ್ಲಿ ಉಂಟಾಗುವ ಹವಾಮಾನ ಬದಲಾವಣೆಗೆ ಮನುಷ್ಯನೇ ಕಾರಣವಾಗಿರುವುದರಿಂದ ಇದನ್ನು ಸರಿಪಡಿಸುವ ಹೊಣೆಯೂ ಮನುಷ್ಯರದ್ದೇ ಆಗಿದೆ ಎಂದು ಪ್ರತಿಪಾದಿಸಿದರು.

ADVERTISEMENT

ಪ್ರಕೃತಿಯಲ್ಲಿ ಸಮತೋಲನ ಕಾಪಾಡಿಕೊಂಡು ಮುಂದೆ ಸಂಭವಿಸಬಹುದಾದ ನೈಸರ್ಗಿಕ ವಿಕೋಪಗಳನ್ನು ತಡೆಗಟ್ಟಬೇಕು. ಇದರಲ್ಲಿ ಯುವಜನಾಂಗದ ಪಾತ್ರ ಮಹತ್ವದ್ದು ಎಂದು ತಿಳಿಸಿದರು.

ಭಾರತೀಯ ವಿಜ್ಞಾನ ಕೇಂದ್ರದ ವಿಜ್ಞಾನಿ ಜೆ.ಶ್ರೀನಿವಾಸನ್‌, ಪ್ರಾಧ್ಯಾಪಕ ರವಿ ನಂಜುಂಡಯ್ಯ, ಏಟ್ರಿಯಾ ವಿಶ್ವವಿದ್ಯಾಲಯದ ಕುಲಾಧಿಪತಿ ಸುಂದರ್‌ರಾಜು, ಕುಲಪತಿ ನಾಯರ್‌, ಏಟ್ರಿಯಾ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ರಾಜೇಶ್‌, ಉಪಪ್ರಾಂಶುಪಾಲರಾದ ಡಾ.ನಳಿನಾಕ್ಷಿ ಎನ್‌. ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.