ಬೆಂಗಳೂರು: ಆನ್‌ಲೈನ್ ಮೂಲಕ ಓಲಾ ಬೈಕ್ ಖರೀದಿಸಲು ಮುಂದಾಗಿದ್ದ ನಗರದ ನಿವಾಸಿ ಅಬ್ದುಲ್ ಎಂಬುವರು ₹76,960 ಕಳೆದುಕೊಂಡಿದ್ದು, ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ತಲಘಟ್ಟಪುರ ನಿವಾಸಿ ಅಬ್ದುಲ್ ಅವರು ಇತ್ತೀಚೆಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ಏಪ್ರಿಲ್ 14ರಂದು ಅಬ್ದುಲ್ ಅವರಿಗೆ ಕರೆ ಮಾಡಿದ್ದ ಆರೋಪಿ, ‘ಆನ್‌ಲೈನ್ ಮೂಲಕ ಕಡಿಮೆ ಬೆಲೆಗೆ ಓಲಾ ಬೈಕ್ ಮಾರುತ್ತಿದ್ದೇವೆ’ ಎಂದಿದ್ದ. ಮಾತು ನಂಬಿದ್ದ ದೂರುದಾರ, ಆತನ ಜೊತೆ ವ್ಯವಹಾರ ಮುಂದುವರಿಸಿದ್ದರು. ಆರೋಪಿಯು ಹಂತ ಹಂತವಾಗಿ ₹ 76,960 ಪಡೆದಿದ್ದ. ಬಳಿಕ, ಬೈಕ್ ನೀಡದೇ ನಾಪತ್ತೆಯಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು
ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.