ಬೆಂಗಳೂರು: ಮಲ್ಲೇಶ್ವರದ ಸರ್ಕಾರಿ ಶಾಲಾ ಮೈದಾನದಲ್ಲಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಷ್ಠಾನವು ಏರ್ಪಡಿಸಿರುವ ನೈಸರ್ಗಿಕ (ಸಾವಯವ) ಮಾವು ಮೇಳವನ್ನು ಮಂಗಳವಾರದವರೆಗೆ (ಜೂನ್ 7) ವಿಸ್ತರಿಸಲಾಗಿದೆ.
ಮೇಳಕ್ಕೆ ಭಾನುವಾರ ಭೇಟಿ ನೀಡಿದ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ‘ಮೇಳದಲ್ಲಿ ಮೂರು ದಿನಗಳಲ್ಲಿ 6 ಟನ್ ಮಾವು ಮಾರಾಟವಾಗಿದ್ದು, ಅಂದಾಜು ₹6 ಲಕ್ಷ ವಹಿವಾಟು ನಡೆದಿದೆ. ಇದು ರೈತರು ಮತ್ತು ಸಾವಯವ ಕೃಷಿ ಪದ್ಧ ತಿಗೆ ಪ್ರತಿಷ್ಠಾನವು ಒದಗಿಸುತ್ತಿರುವ ಉತ್ತೇ ಜನಕ್ಕೆ ಸಾಂಕೇತಿಕ ಕ್ರಮ’ ಎಂದರು.
'ಜನರು ರಾಸಾಯನಿಕಗಳ ಬಳಕೆ ಇಲ್ಲದ ನಿಸರ್ಗ ಸಹಜ ಆಹಾರ ಪದಾರ್ಥಗಳನ್ನು ಮತ್ತು ಹಣ್ಣು ಹಂಪಲುಗಳನ್ನು ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದರಿಂದ ಅನಗತ್ಯವಾಗಿ ಆಸ್ಪತ್ರೆಗಳಿಗೆ ಅಲೆದಾಡುವ ಮತ್ತು ಅನಾರೋಗ್ಯಕ್ಕೆ ಈಡಾಗುವ ಅಪಾಯವು ತಪ್ಪುತ್ತದೆ’ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವರು, ಮಳಿಗೆ ಹಾಕಿರುವ 20 ರೈತರಿಗೆ ನೆನಪಿನ ಕಾಣಿಕೆ ವಿತರಿಸಿದರು. ಬಿಜೆಪಿ ಮಲ್ಲೇಶ್ವರಂ ಮಂಡಲದ ಅಧ್ಯಕ್ಷೆ ಕಾವೇರಿ ಕೇದಾರನಾಥ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.