ಬೆಂಗಳೂರು: ರಾಜ್ಯ ಮಾವು ಅಭಿವೃದ್ಧಿ ನಿಗಮದ ವತಿಯಿಂದ ಇದೇ 24ರಿಂದ ಜೂನ್ 10ರವರೆಗೆ ‘ಮಾವು ಮತ್ತು ಹಲಸು’ ಮೇಳ ಲಾಲ್‌ಬಾಗ್‌ನಲ್ಲಿ ನಡೆಯಲಿದೆ.
ಮೇಳದಲ್ಲಿ ಸುಮಾರು 74 ಮಾವು, 9 ಹಲಸು ಮತ್ತು 14 ಇತರೆ ಹಣ್ಣಿನ ಮಳಿಗೆಗಳು ಇರಲಿವೆ. ಕೊಪ್ಪಳದ ಕೇಸರ್, ಚಿತ್ರದುರ್ಗ ಮತ್ತು ತುಮಕೂರಿನ ಬಾದಾಮಿ, ರಸಪುರಿ, ಬೆನಿಶಾ, ಮಲಗೋವಾ, ಮಲ್ಲಿಕಾ, ಆಮ್ರಪಾಲಿ, ದಶೇರಿ, ಬಂಗನಪಲ್ಲಿ, ರಸಪುರಿ, ಇಮಾಮ್ ಪಸಂದ್‌ನಂತಹ ತಳಿಗಳು ಮೇಳದಲ್ಲಿ ಲಭ್ಯವಿರುತ್ತವೆ. ಕಳೆದ ವರ್ಷ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ‘ಕರಿ ಇಶಾಡಿ’ ಮಾವಿನ ತಳಿಯ ಹಣ್ಣುಗಳೂ ಮೇಳಕ್ಕೆ ಬರಲಿವೆ. ಮಾವು ಮತ್ತು ಹಲಸಿನ ವೈವಿಧ್ಯಮಯ ಮೌಲ್ಯವರ್ಧಿತ ಉತ್ಪನ್ನಗಳೂ ಮಾರಾಟಕ್ಕಿರಲಿವೆ‘ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಇಂದಿನಿಂದ 18 ದಿನಗಳವರೆಗೆ ಮಾವು ಮೇಳ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಗ್ರಾಹಕರಿಗೆ ಮುಕ್ತವಾಗಿರಲಿದೆ. ಇಲ್ಲಿ ಸಹಜವಾಗಿ ಮಾಗಿದ ಅಥವಾ ಇಥಲೀನ್ ಉಪಚರಿಸಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.