ADVERTISEMENT

ಎದೆಹಾಲಿನಿಂದ ರೋಗನಿರೋಧಕ ಶಕ್ತಿ ಹೆಚ್ಚಳ: ನಟಿ ಪ್ರಣೀತಾ ಸುಭಾಷ್

ಸ್ತನ್ಯಪಾನ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:23 IST
Last Updated 11 ಆಗಸ್ಟ್ 2022, 4:23 IST
ಸ್ತನ್ಯಪಾನ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ಜ್ಯೋತಿ ವಿ. ಶೆಣೈ, ಪ್ರಣೀತಾ ಸುಭಾಷ್, ಯಶವಂತಪುರದ ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಕರ್ನಲ್ ರಾಹುಲ್ ತಿವಾರಿ ಮತ್ತು ಡಾ. ಫಣಿಭೂಷಣ್ ಅವರು ‘ಮಹಿಳಾ ಆರೋಗ್ಯ ಪ್ಯಾಕೇಜ್’ ಬಿಡುಗಡೆ ಮಾಡಿದರು –ಪ್ರಜಾವಾಣಿ ಚಿತ್ರ
ಸ್ತನ್ಯಪಾನ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ಜ್ಯೋತಿ ವಿ. ಶೆಣೈ, ಪ್ರಣೀತಾ ಸುಭಾಷ್, ಯಶವಂತಪುರದ ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಕರ್ನಲ್ ರಾಹುಲ್ ತಿವಾರಿ ಮತ್ತು ಡಾ. ಫಣಿಭೂಷಣ್ ಅವರು ‘ಮಹಿಳಾ ಆರೋಗ್ಯ ಪ್ಯಾಕೇಜ್’ ಬಿಡುಗಡೆ ಮಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ತಾಯಿಯ ಎದೆಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಪೌಷ್ಟಿಕತೆ, ಖನಿಜಾಂಶ ಮತ್ತು ಹೇರಳವಾದ ನೀರಿನ ಅಂಶಗಳು ಅಡಕವಾಗಿವೆ‌. ಶಿಶುಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆತಾಯಿಯ ಎದೆಹಾಲು ಸಹಕಾರಿ’ ಎಂದು ಚಲನಚಿತ್ರ ನಟಿ ಪ್ರಣೀತಾ ಸುಭಾಷ್ ತಿಳಿಸಿದರು.

ಯಶವಂತಪುರದ ಮಣಿಪಾಲ್ ಆಸ್ಪತ್ರೆಯು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ತನ್ಯಪಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ‘ತಾಯಿಯ ಎದೆಹಾಲುಮಗುವಿಗೆ ಮೊದಲ ಲಸಿಕೆಯಾಗಿದ್ದು, ರೋಗಗಳಿಂದ ರಕ್ಷಣೆ ಒದಗಿಸಲಿದೆ.ಸ್ತನ್ಯಪಾನ ಮಕ್ಕಳ ಮೇಲೆ ಹೆಚ್ಚಿನ ಸಕಾರಾತ್ಮ ಪರಿಣಾಮ ಬೀರುತ್ತದೆ. ತಾಯಿ ಮತ್ತು ಮಗುವಿನ ಬಾಂಧವ್ಯ ಬಲಗೊಳ್ಳಲು ಸ್ತನ್ಯಪಾನ ಸಹಕಾರಿ’ ಎಂದು ಹೇಳಿದರು.

ನವಜಾತ ಶಿಶುಗಳ ರೋಗತಜ್ಞ ಡಾ. ಫಣಿಭೂಷಣ್, ‘ತಾಯಿಯ ಎದೆಹಾಲಿನಷ್ಟು ಪೋಷಕಾಂಶ ಭರಿತ ಆಹಾರ ಭೂಮಿಯ ಮೇಲೆ ಬೇರೆ ಇಲ್ಲ.ಮೊದಲ ಮೂರು ದಿನದ ಹಾಲಿನಲ್ಲಿ ಹೆಚ್ಚು ರೋಗನಿರೋಧಕಗಳಿರಲಿದ್ದು, ಮಗುವಿನಲ್ಲಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜನಿಸಿದ ಒಂದು ಗಂಟೆಯೊಳಗೆ ಹಾಲುಣಿಸಲು ಪ್ರಾರಂಭಿಸಿ, ಆರು ತಿಂಗಳವರೆಗೆ ಎದೆಹಾಲನ್ನು ಮಾತ್ರ ನೀಡಬೇಕು’ ಎಂದು ತಿಳಿಸಿದರು.

ADVERTISEMENT

ಸ್ತ್ರೀರೋಗ ತಜ್ಞೆ ಡಾ. ಜ್ಯೋತಿ ವಿ. ಶೆಣೈ,‘ಎದೆಹಾಲಿನ ಬಗ್ಗೆ ಜಾಗೃತಿ ಹೆಚ್ಚಬೇಕು. ಶಿಶುಗಳು ಆರೋಗ್ಯದಿಂದ ಇರಲು ಎದೆಹಾಲು ಸಹಕಾರಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.