ಬೆಂಗಳೂರು: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೇಯ ಕೃತ್ಯವನ್ನು ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಖಂಡಿಸಿದೆ.
ಬಂಡಾಯ ಸಾಹಿತ್ಯ ಸಂಘಟನೆಯ ಬರಗೂರು ರಾಮಚಂದ್ರಪ್ಪ, ಜಿ. ರಾಮಕೃಷ್ಣ, ಆರ್.ಜಿ.ಹಳ್ಳಿ ನಾಗರಾಜ್, ಭಕ್ತರಹಳ್ಳಿ ಕಾಮರಾಜ್, ಎಚ್.ಎಲ್. ಪುಷ್ಪ, ಸುಕನ್ಯಾ ಮಾರುತಿ, ಎಲ್. ಹನುಮಂತಯ್ಯ, ವೈ.ಬಿ. ಹಿಮ್ಮಡಿ, ಕೆ. ಶರೀಫಾ, ಸಿದ್ಧನಗೌಡ ಪಾಟೀಲ, ಅಶ್ವಿನಿ ಮದನಕರ, ಬಿ.ಎಂ. ಹನೀಫ್, ಪಿ.ಆರ್. ವೆಂಕಟೇಶ್, ಗುರುಶಾಂತ್, ಬಿ. ರಾಜಶೇಖರ ಮೂರ್ತಿ, ಬಿ.ಎನ್. ಮಲ್ಲೇಶ್, ಎ.ಬಿ. ರಾಮಚಂದ್ರಪ್ಪ ಅವರು ಖಂಡನಾ ಹೇಳಿಕೆ ನೀಡಿದ್ದಾರೆ.
ಇದೊಂದು ಆಘಾತಕಾರಿ ಘಟನೆಯಾಗಿದ್ದು, ಮಾನವೀಯ ಮೌಲ್ಯದ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಘಟನೆ ನಡೆದು 77 ದಿನಗಳ ನಂತರ ಬಯಲಾಗಿರುವುದು ಮತ್ತು ಕ್ರಮ ಕೈಗೊಳ್ಳಲು ವಿಳಂಬವಾಗಿರುವುದು ಆಡಳಿತಗಾರರ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಹಿಂಸೆಯನ್ನು ನಿಯಂತ್ರಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನಾದರೂ ಎಲ್ಲ ಪಕ್ಷಗಳ, ಚಿಂತಕರ, ಸಾಮಾಜಿಕ ಕಾರ್ಯಕರ್ತರ ಸಹಕಾರವನ್ನು ಪಡೆದು ಶಾಂತಿ ಸ್ಥಾಪನೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.